ಅಪರಾಧ ಸುದ್ದಿ

ಹುಬ್ಬಳ್ಳಿಯ ಲ್ಲಿ ಕಂಬಕ್ಕೆ ಕಟ್ಟಿ ಕಾಮುಕನಿಗೆ ಥಳಿತ

Share It

ಹುಬ್ಬಳ್ಳಿ: ದಾರಿಯಲ್ಲಿ ಹೋಗಿಬರುವ ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಕಾಮುಕನಿಗೆ ಸ್ಥಳೀಯರೇ ಥಳಿಸಿದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

ಹುಬ್ಬಳ್ಳಿಯ ಕಸಬಾ ಠಾಣೆಯ ವ್ಯಾಪ್ತಿಯ
ಈಶ್ವರ ನಗರದಲ್ಲಿ ಸಂಜೆ ಮತ್ತು ಬೆಳಗ್ಗಿನ ವೇಳೆ ಮಹಿಳೆಯರನ್ನು ಚುಡಾಯಿಸುವುದು, ಕೆಟ್ಟದಾಗಿ ಸನ್ನೆ ಮಾಡುವುದು ಮಾಡುತ್ತಿದ್ದ ಎನ್ನಲಾಗಿದೆ. ಈ ಕಾರಣಕ್ಕೆ ಆಕ್ರೋಶಗೊಂಡ ಸಾರ್ವಜನಿಕರು ಆತನಿಗೆ ಥಳಿಸಿದ್ದಾರೆ.

ಘಟನೆಯ ನಂತರ ಪೊಲೀಸರು ಸ್ಥಳಕ್ಕೆ ಆಗಮಿಸಿದ ಆ ವ್ಯಕ್ತಿಯನ್ನು ವಶಕ್ಕೆ ಪಡೆದುಕೊಂಡಿದ್ದು, ವಿಚಾರಣೆ ಮಡೆಸುತ್ತಿದ್ದಾರೆ ಎಂದು ಹೇಳಲಾಗಿದೆ.


Share It

You cannot copy content of this page