ಶ್ರವಣಬೆಳಗೊಳ: ಐತಿಹಾಸಿಕ ಕಾಂತರಾಜಪುರ ಗ್ರಾಮಕ್ಕೆ ನೂತನ ಬಸ್ ಮಾರ್ಗವನ್ನು ಆರಂಭಿಸಿದ್ದು, ಶಾಸಕ ಸಿ.ಎನ್. ಬಾಲಕೃಷ್ಣ ಚಾಲನೆ ನೀಡಿದರು.
ತಾಲೂಕು ಕೇಂದ್ರದಿಂದ 20 ಕಿ.ಮೀ.ದೂರ ಹಾಗೂ ಐತಿಹಾಸಿಕ ಸ್ಥಳವಾದ ಶ್ರವಣಬೆಳಗೊಳ ದಿಂದ ಎಂಟು ಕಿ.ಮೀ. ದೂರದಲ್ಲಿರುವ ಕಾಂತಾರಾಜಪುರ ಗ್ರಾಮವು ಅನೇಕ ಐತಿಹಾಸಿಕ ವಿಷಯಗಳಿಗೆ ಪ್ರಸಿದ್ಧವಾಗಿದೆ.
ತಾಲೂಕಿನ ಅತ್ಯಂತ ಹಳೆಯ ಗ್ರಾಮ, ಅತ್ಯಂತ ಹೆಚ್ಚು ಸ್ವಾತಂತ್ರ್ಯ ಹೋರಾಟಗಾರರನ್ನು ಹೊಂದಿದ್ದ ಗ್ರಾಮ, ರಾಜಕಾರಣಿಗಳು, ದೊಡ್ಡ ದೊಡ್ಡ ಅಧಿಕಾರಿಗಳು ಗ್ರಾಮದಿಂದ ಹೊರಬಂದಿದ್ದಾರೆ.
