ಅಪರಾಧ ಸಿನಿಮಾ ಸುದ್ದಿ

ರೇಣುಕಾಸ್ವಾಮಿ ಕೊಲೆ ಪ್ರಕರಣ: ಪೊಲೀಸರಿಂದ ಸುಳ್ಳು ಚಾರ್ಜ್ ಶೀಟ್ ಸಲ್ಲಿಕೆ: ಹಿರಿಯ ವಕೀಲ ಬಾಲನ್

Share It

ಹಾವೇರಿ: ದರ್ಶನ್ ಭಾಗಿಯಾಗಿರಿವ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪೊಲೀಸರು ಸುಳ್ಳು ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. ಹೀಗಾಗಿ, ಪ್ರಕರಣ ಶೀಘ್ರದಲ್ಲೇ ತಾರ್ತಿಕ ಅಂತ್ಯ ತಲುಪಲಿದೆ ಎಂದು ಹಿರಿಯ ವಕೀಲ ಬಾಲನ್ ತಿಳಿಸಿದ್ದಾರೆ.

ಪ್ರಸ್ತುತ ಎ1 ಆರೋಪಿ ಪವಿತ್ರಾ ಗೌಡ ಪರ ವಕೀಲರಾದ ಅವರು ಪ್ರಕರಣದ ಕುರಿತು ಮಾತನಾಡಿ, ಇದೇ ತಿಂಗಳ 17ನೇ ತಾರೀಖಿನಿಂದ‌ ದರ್ಶನ್ ಕೇಸ್ ಪ್ರಾರಂಭ ಆಗುತ್ತೆ. ಪೊಲೀಸರು ಈ ಕೇಸ್​ನಲ್ಲಿ ಸುಳ್ಳು ಚಾರ್ಜ್‌ಶೀಟ್ ಹಾಕಿದ್ದಾರೆ ಎಂದು ಆರೋಪಿಸಿದರು.

ಎರಡು ಗಾಡಿ ಉಪಯೋಗ ಮಾಡಿದ್ದಾರೆ ಅನ್ನೋ ಕೇಸ್​ನಲ್ಲಿ, ಗಾಡಿಯಲ್ಲಿ ಕೂದಲು ಬಿದ್ದಿದ್ದೇ‌ ಕೇಸ್. ಕೂದಲು ವಶಪಡಿಸಿಕೊಂಡಿದ್ದೇವೆ ಅಂತಾರೆ. ಎಫ್​ಎಸ್​ಎಲ್​ಗೆ ಕಳುಸಿದ್ದೇವೆ. ಈಗ ಅದರ ರಿಪೋರ್ಟ್ ಬಂದಿದೆ. ಐಓ ಹೇಳುತ್ತಾರೆ ಅದು ಪವಿತ್ರಾ ಗೌಡ ಕೂದಲು ಅಂತ. ಯಾರ ಕೂದಲು ಅನ್ನೋದನ್ನು ಕಂಡುಹಿಡಿದಿಲ್ಲ. ಈ ರೀತಿ ಪ್ರಕರಣ ಇದೆ ಎಂದರು.

ಟ್ರಯಲ್ ನಡೆಯುತ್ತಿದೆ. ಕೇಸ್ ದಾರಿ ತಪ್ಪಿದೆ. ನಾವು ದಾರಿಗೆ ತರುತ್ತೇವೆ.‌ ಯಾರು‌ ನಿರಪರಾಧಿಯೋ ಅವರು ಹೊರ ಬರುತ್ತಾರೆ. ಜಾಮೀನು ಅರ್ಜಿ ವಜಾ ಆಗಿದೆ. ಸುಪ್ರೀಂ ಕೋರ್ಟ್​ ನ್ಯಾಯಮೂರ್ತಿಗಳ ಆರ್ಡರ್ ಇದು. ನಾನು ಪವಿತ್ರಾ ಗೌಡ ಕೇಸ್ ನಡೆಸುತ್ತೇನೆ. ಅವರು ಹೊರಗೆ ಬರುತ್ತಾರೆ. ಹೊರಬರಲು ಕನಿಷ್ಠ ಒಂದು ವರ್ಷ ಬೇಕು ಎಂದು ಹೇಳಿದರು.

ನ್ಯಾಯಾಲಯದಲ್ಲಿ ನಿಜ ಸುಳ್ಳಾಗುತ್ತಿದೆ, ಸುಳ್ಳು ನಿಜವಾಗುತ್ತೆ. ಕಪ್ಪು ಬಿಳಿ ಆಗುತ್ತೆ, ಬಿಳಿ ಕಪ್ಪಾಗುತ್ತೆ. ಒಬ್ಬ ಮನುಷ್ಯ ಸತ್ತಿದ್ದಾನೆ, ಮರ್ಡರ್ ಆಗಿದೆ. ಚಿತ್ರದುರ್ಗದಿಂದ ಬೆಂಗಳೂರಿಗೆ ಬಂದಿದ್ದಾನೆ. ಪೊಲೀಸರು ಸುಳ್ಳು ಜಾರ್ಜ್​ಶೀಟ್ ಹಾಕಿದ್ದಾರೆ ಅಂತ ನಾನು ಹೇಳುತ್ತೇನೆ. ಏಳು ಜನರ ಬೇಲ್ ರದ್ದಾಗಿದೆ ಎಂದು ಬಾಲನ್ ತಿಳಿಸಿದರು.


Share It

You cannot copy content of this page