ಚಾಲಕರಿಗೆ ಮತ್ತೊಂದು ಗುಡ್ ನ್ಯೂಸ್ ನೀಡಿದ KSRTC: ಅಪಘಾತ ರಹಿತ ಚಾಲನೆಗೆ ಹೆಚ್ಚುವರಿ ಭತ್ಯೆ
ಬೆಂಗಳೂರು: ಕೆ ಎಸ್ ಆರ್ ಟಿಸಿ ಬಸ್ ಗಳಲ್ಲಿ ಅಪಘಾತರಹಿತ ಚಾಲನೆಗಾಗಿ ಅನೇಕ ಕ್ರಮಗಳನ್ನು ತೆಗೆದುಕೊಂಡಿದೆ. ಪ್ರಸ್ತುತ ಅಪಘಾತ ರಹಿತ ಚಾಲನೆ ಮಾಡುವ ಚಾಲಕರಿಗೆ ನೀಡುವ ಹತ್ಯೆಯನ್ನು ಹೆಚ್ಚಿಸಲಾಗಿದೆ.
ಈ ಕುರಿತು ಸಂಸ್ಥೆಯ ಎಂಡಿ ಅಕ್ರಂ ಪಾಷ ಸುತ್ತೋಲೆ ಹೊರಡಿಸಿದ್ದು, ಅದರಂತೆ ಅಪಘಾತ ರಹಿತ ಚಾಲನೆಗಾಗಿ ಮುಖ್ಯಮಂತ್ರಿ ಪದಕ ಪಡೆಯುವ ಚಾಲಕರಿಗೆ ಈ ಹಿಂದೆ ನೀಡುತ್ತಿದ್ದ 5,000 ರು. ಭತ್ಯೆಯನ್ನು ಹೆಚ್ಚಿಸಿ, 10,000 ರು. ನೀಡಲು ತೀರ್ಮಾನಿಸಲಾಗಿದೆ. ಹಾಗೆ, ಮಾಸಿಕ ಭತ್ಯೆಯನ್ನು ಈ ಹಿಂದಿನ 500 ರು. ಬದಲಿಗೆ 1000 ರು.ಹೆಚ್ಚಿಸಲಾಗಿದೆ.
ಇನ್ನು ಬೆಳ್ಳಿಯ ಪದಕ ಪಡೆಯುವ ಚಾಲಕರಿಗೆ ನೀಡುತ್ತಿದ್ದ 2500 ರು. ಅನ್ನು 5000 ರುಗೆ ಹೆಚ್ಚಿಸಲಾಗಿದೆ. ಮಾಸಿಕ ಭತ್ಯೆಯನ್ನು 250 ರು.ಗಳಿಂದ 500 ರು.ಗೆ ಹೆಚ್ಚಳ ಮಾಡಲಾಗಿದೆ. ಈ ಆದೇಶವು 1-1-2026 ರ ನಂತರ ಪದಕ ಪಡೆಯುವ ಚಾಲಕರಿಗೆ ಅನ್ವಯವಾಗಲಿದೆ. ಈಗಾಗಲೇ ಪದಕ ಪಡೆದಿರುವವರಿಗೆ ಮಾಸಿಕ ಭತ್ಯೆಯನ್ನು ಜನವರಿಯಿಂದ ಹೆಚ್ಚಿಸಲಾಗುವುದು.


