ಗೋವಾ ನೈಟ್ ಕ್ಲಬ್ ದುರಂತ: ಲೂಥರ್ ಸಹೋದರರು ಭಾರತಕ್ಕೆ
ನವದಹಲಿ: ಗೋವಾದಲ್ಲಿ 25 ಜನರ ಸಾವಿಗೆ ಕಾರಣವಾದ ನೈಟ್ ಕ್ಲಬ್ ದುರಂತದ ಆರೋಪಿಗಳಾದ ಲೂಥರ್ ಸಹೋದರರು ಇಂದು ಭಾರತಕ್ಕೆ ಆಗಮಿಸಿದ್ದಾರೆ.
ಬ್ಯಾಕಾಂಕ್ ನಲ್ಲಿ ವಾಸವಿದ್ದು, ಅಲ್ಲಿಂದಲೇ ಗೋವಾದಲ್ಲಿ ವ್ಯವಹಾರ ನಡೆಸುತ್ತಿದ್ದ ಸಹೋದರರನ್ನು ಘಟನೆಯ ನಂತರ ಭಾರತಕ್ಕೆ ಕರೆತರುವ ಪ್ರಯತ್ನವನ್ನು ಗೋವಾ ಪೊಲೀಸರು ಮಾಡಿದ್ದರು. ಪೊಲೀಸರ ನೋಟೀಸ್ ಹಿನ್ನೆಲೆಯಲ್ಲಿ ಅವರು ಭಾರತಕ್ಕೆ ಬಂದಿದ್ದಾರೆ.
ದೆಹಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಇಂಡಿಗೋ ವಿಮಾನದ ಮೂಲಕ ಆಗಮಿಸಿದ ಲೂಥರ್ ಸಹೋದರರನ್ನು ಪೊಲೀಸರು ವಶಕ್ಕೆ ಪಡೆದರು.


