ಬೈಕ್ ಅಪಘಾತ: ಮೂವರು ಯುವಕರು ಸ್ಥಳದಲ್ಲೇ ಸಾವು, 48 ಗಂಟೆಗಳ ಅಂತರದಲ್ಲಿ ತಂದೆ ಮಗ ಸಾವು

Share It

ಕೊಪ್ಪಳ: ಬೈಕ್​ ಹಾಗೂ ಬೊಲೆರೋ ನಡುವಿನ ಭೀಕರ ಅಪಘಾತದಲ್ಲಿ ಮೂವರು ಯುವಕರು ಸಾವಿಗೀಡಾದ ಘಟನೆ ಕೊಪ್ಪಳ ತಾಲೂಕಿನ ಇಂದರಗಿ ಬಳಿ ಬುಧವಾರ ರಾತ್ರಿ ಸಂಭವಿಸಿದೆ.

ಮೃತರನ್ನು ಕೊಪ್ಪಳ ತಾಲೂಕಿನ ಹೊಸಹಳ್ಳಿ ನಿವಾಸಿಗಳಾದ ವಾಜೀದ್, ರಾಜಾ ಹುಸೇನ್ ಹಾಗೂ ಗಂಗಾವತಿ ತಾಲೂಕಿನ ಶ್ರೀರಾಮನಗರ ನಿವಾಸಿ ಆಸೀಫ್​ ಎಂದು ಗುರುತಿಸಲಾಗಿದೆ.
ಶ್ರೀರಾಮನಗರಿಂದ ಹೊಸಹಳ್ಳಿಗೆ ಬರುವಾಗ ಬೈಕ್​ಗೆ ಬೊಲೆರೋ ವಾಹನ ಡಿಕ್ಕಿಯಾಗಿ ಈ ಅಪಘಾತ ಜರುಗಿದೆ. ಅಪಘಾತದ ಬಳಿಕ ಬೊಲೆರೋ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಈ ಬಗ್ಗೆ ಮುನಿರಾಬಾದ್ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಳೆದ ಎರಡು ದಿನಗಳ ಹಿಂದೆ ರಾಜಾಹುಸೇನ್ ತಂದೆ ಬುಡನ್ ಸಾಬ್ ಕೂಡ ಕೊಪ್ಪಳ ತಾಲೂಕಿನ ಹಿಟ್ನಾಳ ಟೋಲ್ ಗೇಟ್ ಬಳಿ ಸಂಭವಿಸಿದ ಅಪಘಾತದಲ್ಲಿ ಸಾವನ್ನಪ್ಪಿದ್ದರು. ಈಗ ಬೈಕ್ ಅಪಘಾತದಲ್ಲಿ ಮಗ ರಾಜಾಹುಸೇನ್ ಸಹ ಮೃತಪಟ್ಟಿದ್ದಾನೆ. ಕೇವಲ 48 ಗಂಟೆಗಳ ಅವಧಿಯಲ್ಲೇ ತಂದೆ – ಮಗನ ದುರಂತ ಅಂತ್ಯ ಕಂಡಿರುವುದು ಕುಟುಂಬಕ್ಕೆ ಬರಸಿಡಿಲು ಬಡಿದಂತಾಗಿದೆ.


Share It

You May Have Missed

You cannot copy content of this page