ನನ್ನ ಹಕ್ಕುಬಿಟ್ಟುಕೊಡಲು ಸಿದ್ದನಿದ್ದೇನೆ, ಆರೋಪದ ಚರ್ಚೆಗೆ ಸಿದ್ಧ: ಕೃಷ್ಣ ಬೈರೇಗೌಡರ ಸವಾಲ್..!

Share It

ಬೆಳಗಾವಿ: ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವ್ಯಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಬಹಿರಂಗ ಸವಾಲು ಎಸೆದರು.

ಗುರುವಾರ ವಿಧಾನಸಭೆ ಶೂನ್ಯ ಚರ್ಚೆಯ ವೇಳೆ ಸಚಿವ ಕೃಷ್ಣ ಬೈರೇಗೌಡ ಅವರು ಮೇಲೆ ವಿಧಾನ ಪರಿಷತ್ ವಿಪಕ್ಷ ನಾಯಕರಾದ ಛಲವಾದಿ ನಾರಾಯಣಸ್ವಾಮಿ ಅವರು ಮಾಡಿರುವ ಸ್ಮಶಾನಭೂಮಿ ಒತ್ತುವರಿ ಆರೋಪ ಮಾಡಿದ್ದ ಬಗ್ಗೆ ಚರ್ಚಿಸಲು ಅವಕಾಶ ನೀಡುವಂತೆ ವಿಪಕ್ಷ ನಾಯಕ ಆರ್. ಅಶೋಕ್ ಒತ್ತಾಯಿಸಿದರು.

ಈ ವೇಳೆ ಸ್ವತಃ ಮಧ್ಯ ಪ್ರವೇಶಿಸಿದ ಸಚಿವ ಕೃಷ್ಣ ಬೈರೇಗೌಡ ಅವರು, “ ಅಧಿವೇಶನದ ಸಂದರ್ಭದಲ್ಲಿ ಸದನದ ಸದಸ್ಯರ ಬಗ್ಗೆ ಯಾವುದೇ ವ್ಯಯಕ್ತಿಕ ವಿಚಾರ ಪ್ರಸ್ತಾಪ ಮಾಡಬೇಕಿದ್ದರೆ ಅದಕ್ಕೊಂದು ನಿಯಮಾವಳಿ ಇದೆ. ಕನಿಷ್ಟ ವಾರಕ್ಕೂ ಮುಂಚೆಯೇ ಸದಸ್ಯರಿಗೆ ನೋಟೀಸ್ ನೀಡಬೇಕು. ಆದರೆ, ಈ ವಿಚಾರದಲ್ಲಿ ದಿಢೀರನೆ ಆರೋಪ ಮಾಡಿ ಚರ್ಚೆಗೆ ಅವಕಾಶ ಕೇಳುತ್ತಿದ್ದಾರೆ. ಆದರೂ ನಾನು ಸದನದ  ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಮೇಲಿನ ಆರೋಪದ ಬಗ್ಗೆ ಸದನದಲ್ಲಿ ಚರ್ಚಿಸಲು ಹಾಗೂ ಉತ್ತರ ನೀಡಲು ನನ್ನದೇನೂ ಅಭ್ಯಂತರ ಇಲ್ಲ. ಈ ವಿಚಾರ ಸಭಾಧ್ಯಕ್ಷರ ವಿವೇಚನೆಗೆ ಬಿಟ್ಟದ್ದು” ಎಂದರು.

ಸಭಾಧ್ಯಕ್ಷರಾದ ಯು.ಟಿ. ಖಾದರ್ ಅವರು ಇನ್ನೂ ಸಾಕಷ್ಟು ವಿಧೇಯಕಗಳು ಮಂಡನೆಗೆ ಬಾಕಿ ಇದ್ದು, ತದನಂತರ ಈ ವಿಚಾರವನ್ನು ಚರ್ಚಿಸಲು ಅವಕಾಶ ನೀಡುವುದಾಗಿ ತಿಳಿಸಿದರು.


Share It

You May Have Missed

You cannot copy content of this page