ಬೆಂಗಳೂರು: ಎರಡು ದಿನದಿಂದ ಡಿಕೆಶಿ ಭೇಟಿಯಾಗಿ ಕುತೂಹಲ ಮೂಡಿಸಿದ್ದ ಮಾಜಿ ಸಚಿವ ಕೆ.ಎನ್.ರಾಜಣ್ಣ ಇಂದು ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿದ್ದಾರೆ.
ಸಿಎಂ ಸ್ಥಾನ ಕುರಿತು ಚರ್ಚೆಗಳು ನಡೆಯುವಾಗಲೇ ಡಿಕೆಶಿ ಭೇಟಿಯಾಗಿದ್ದು, ಸಹಜವಾಗಿಯೇ ಕುತೂಹಲ ಕೆರಳಿಸಿತ್ತು. ಇದೀಗ ಡಿಕೆಶಿ ದೆಹಲಿಗೆ ತೆರಳಿದ್ದು, ಅದೇ ಸಂದರ್ಭದಲ್ಲಿ ರಾಜಣ್ಣ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿದ್ದಾರೆ.

