ಚಿತ್ರದುರ್ಗ: ಚಿತ್ರದುರ್ಗ ಬಳಿಯ ಹಿರಿಯೂರು ತಾಲೂಕಿನಲ್ಲಿ ಖಾಸಗಿ ಬಸ್ ಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಬಸ್ ನಲ್ಲಿ ಬೆಂಕಿ ಹೊತ್ತುಕೊಂಡು ಉರಿದು ಒಂಬತ್ತು ಜನ ಸಜೀವ ದಹನವಾಗಿದ್ದಾರೆ.
ಹಿರಿಯೂರಿನಿಂದ ಬೆಂಗಳೂರು ಕಡೆಗೆ ಬರುತ್ತಿದ್ದ ಕಂಟೈನರ್ ಲಾರಿ ಡಿವೈಡರ್ ಗೆ ಡಿಕ್ಕಿ ಹೊಡೆದು, ಎದುರಿಗೆ ಬರುತ್ತಿದ್ದ ಬಸ್ ಗೆ ಗುದ್ದಿದೆ. ಡಿಕ್ಕಿಯ ರಭಸಕ್ಕೆ ಬಸ್ ಗೆ ಬೆಂಕಿ ಹೊತ್ತಿಕೊಂಡಿದ್ದು, ಎಂಟು ಜನರು ಬಸ್ ನಲ್ಲಿಯೇ ಸುಟ್ಟುಕರುಕಲಾಗಿದ್ದಾರೆ.
ಬೆಂಗಳೂರಿನಿಂದ ಗೋಕರ್ಣಕ್ಕೆ ಹೊರಟಿದ್ದ ಬಸ್ ನಲ್ಲಿ 32 ಜನರು ಟಿಕೆಟ್ ಬುಕ್ ಮಾಡಿದ್ದರು ಎನ್ನಲಾಗಿದೆ. ಬಸ್ ನಿಂದ ಚಿಕ್ಕಪುಟ್ಟ ಗಾಯಗಳೊಂದಿಗೆ ಬಚಾವಾಗಿರುವ 25 ಜನರನ್ನು ಗುರುತಿಸಲಾಗಿದೆ. ಏಳು ಜನರು ಮೃತಪಟ್ಟಿರುವ ಶಂಕೆಯಿದೆ. ಟ್ರಕ್ ಡ್ರೈವರ್ ಕೂಡ ಸುಟ್ಟುಕರಕಲಾಗಿದ್ದು, ಒಟ್ಟು 8 ಮಂದಿ ಮೃತಪಟ್ಟಿರುವ ಅನುಮಾನವಿದೆ.

