ಬೆಳಗಾವಿ: ಕಾಲುವೆಗೆ ಈಜಲು ಇಳಿದಿದ್ದ ಇಬ್ಬರು ಬಾಲಕರ ದಾರುಣ ಸಾವು

Share It

ಬೆಳಗಾವಿ: ಈಜಲು ಕಾಲುವೆಗೆ ಇಳಿದಿದ್ದ ಇಬ್ಬರು ಬಾಲಕರು ನೀರುಪಾಲಾದ ಘಟನೆ ರಾಮದುರ್ಗ ತಾಲೂಕಿನ ಪದಮಂಡಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.

ಹಣಮಂತ ದುರ್ಗಪ್ಪ ಹಗೇದ (10) ಬಸವರಾಜ ರಮೇಶ ಸೋಮಣ್ಣವರ (10) ಮೃತಪಟ್ಟ ಬಾಲಕರು. ತಂದೆಯ ಜೊತೆ ಕುರಿ ಕಾಯಲು ಹೋಗಿದ್ದ ಸಂದರ್ಭದಲ್ಲಿ ಕಾಲುವೆಯಲ್ಲಿ ಈಜಲು ತೆರಳಿದ್ದಾರೆ. ನಂತರ ಸ್ವಲ್ಪ ಸಮಯ ಕಳೆದರೂ ಮಕ್ಕಳು ಕಾಣದಿದ್ದಾಗ ಬಾಲಕರ ಪೋಷಕರು ಹುಡುಕಾಟ ನಡೆಸಿದಾಗ ಇಬ್ಬರು ಬಾಲಕರ ಮೃತದೇಹ ಕಾಲುವೆಯಲ್ಲಿ ಪತ್ತೆಯಾಗಿದೆ. ಈ ಕುರಿತು ಕಟಕೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Share It

You May Have Missed

You cannot copy content of this page