ಟಿ-20 ಸರಣಿ: ಭಾರತದ ಸಿಂಹಿಣಿಯರೇ ಮೇಲುಗೈ
ತಿರುವನಂತಪುರ : ಇನ್ನೂ ಎರಡು ಪಂದ್ಯ ಭಾಕಿ ಇರುವಂತೆಯೇ ಶ್ರೀಲಂಕಾದ ವಿರುದ್ಧದ ಐದು ಪಂದ್ಯಗಳಲ್ಲಿ ಮೂರನ್ನು ಗೆದ್ದು ಸರಣಿ ಕೈವಶ ಮಾಡಿಕೊಂಡಿದೆ.
ತಿರುವನಂತಪುರದಲ್ಲಿ ನಡೆದ ಮೂರನೇ ಪಂದ್ಯದಲ್ಲಿ ಶ್ರೀಲಂಕಾವನ್ನು ಅಲ್ಪಮೊತ್ತಕ್ಕೆ ಕಟ್ಟಿಹಾಕುವಲ್ಲಿ ಕಾರಣರಾದ ರೇಣುಕಾ ಯಾದವ್ ಮತ್ತು ದೀಪ್ತಿಶರ್ಮ ಪಂದ್ಯದ ದಿಕ್ಕನ್ನು ಬದಲಿಸಿದರು.
ಶ್ರೀಲಂಕಾ 20 ಓವರ್‌ಗಳಲ್ಲಿ ಕೇವಲ 122 ರನ್ ಗಳಿಸಲಷ್ಟೇ ಸಾಧ್ಯವಾಯಿತು. ಅಲ್ಪಮೊತ್ತದ ಗುರಿ ಬೆನ್ನತ್ತಿದ ಭಾರತ ಶಫಾಲಿವರ್ಮಾ ಅವರ ಅರ್ಧಶತಕದ ನೆರವಿನಿಂದ ಸುಲಭವಾಗಿ ಗುರಿ ತಲುಪುವ ಮೂಲಕ ಸರಣಿಯನ್ನು ಗೆದ್ದುಕೊಂಡಿತು. ಇನ್ನೆರಡು ಪಂದ್ಯಗಳು ಡಿಸೆಂಬರ್ 28 ಹಾಗೂ 30 ರಂದು ನಡೆಯಲಿವೆ.


