ಚಳಿಯಿಂದ ರಕ್ಷಣೆ ಪಡೆಯಲು ಬೆಂಕಿ ಕುಂಡ: ಉಸಿರುಗಟ್ಟಿ ನಾಲ್ವರ ಸಾವು, ಮೂವರ ಸ್ಥಿತಿ ಗಂಭೀರ
ಛಾಪ್ರಾ (ಬಿಹಾರ) : ಚಳಿಯಿಂದ ರಕ್ಷಣೆ ಪಡೆಯಲು ಹಚ್ಚಿದ್ದ ಅಗ್ಗಿಷ್ಟಿಕೆಯ ಹೊಗೆಯಿಂದ ಉಸಿರುಗಟ್ಟಿ ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿರುವ ಘಟನೆ ಬಿಹಾರದ ಛಾಪ್ರಾದಲ್ಲಿ ನಡೆದಿದಡ.
ನಗರದ ಭಗವಾನ್ ಬಜಾರ್ ಪೊಲೀಸ್ ಠಾಣೆ ವ್ಯಾಪ್ತಿಯ ಅಂಬಿಕಾ ಕಾಲೋನಿಯಲ್ಲಿ ಈ ಹೃದಯವಿದ್ರಾವಕ ಘಟನೆ ನಡೆದಿದ್ಸು, ಒಂದೇ ಕುಟಯಂಬದ ನಾಲ್ವರು ಮೃತಪಟ್ಟಿದ್ದಾರೆ. ಘಟನೆಯಲ್ಲಿ ಮೂವರ ಸ್ಥಿತಿ ಗಂಭೀರವಾಗಿದೆ.
ಚಳಿಯಿಂದ ತಮ್ಮನ್ನು ರಕ್ಷಿಸಿಕೊಳ್ಳಲು, ಕುಟುಂಬವು ಮುಚ್ಚಿದ ಕೋಣೆಯಲ್ಲಿ ಮಲಗಿತ್ತು. ಅಲ್ಲಿ ಅಗ್ಗಿಷ್ಟಿಕೆ ಉರಿಯುತ್ತಿತ್ತು. ಕೊಠಡಿ ಮುಚ್ಚಿದ್ದರಿಂದಾಗಿ ಅಗ್ಗಿಷ್ಟಿಕೆ ಹೊಗೆ ಕೋಣೆಯನ್ನೆಲ್ಲ ತುಂಬಿಕೊಂಡಿತ್ತು. ಆಮ್ಲಜನಕದ ಕೊರತೆ ಉಂಟಾಗಿ ಅಲ್ಲಿದ್ದವರಿಗೆ ಪ್ರಜ್ಞೆ ತಪ್ಪಿದೆ. ನಾಲ್ವರು ಉಸಿರುಗಟ್ಟಿ ಮೃತಪಟ್ಟಿದ್ದಾರೆ.
ಮೃತರಲ್ಲಿ ಮೂವರು ಚಿಕ್ಕ ಮಕ್ಕಳು ಮತ್ತು ವೃದ್ಧ ಮಹಿಳೆ ಸೇರಿದ್ದಾರೆ. ಕಮಲಾವತಿ ದೇವಿ (70), ತೇಜನ್ಶ್ ಕುಮಾರ್ (3), ಆದ್ಯ ಕುಮಾರಿ (7 ತಿಂಗಳು) ಗುಡಿಯಾ ಕುಮಾರಿ (9 ತಿಂಗಳು) ಮೃತ ದುರ್ದೈವಿಗಳು. ಘಟನೆಯಲ್ಲಿ ಮೂವರು ಗಂಭೀರವಾಗಿ ಗಾಯಗೊಂಡಿದ್ದು, ಅವರು ಸದರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ.


