ಸುದ್ದಿ

ಅಮೇರಿಕಾದಲ್ಲಿ ಭಾರಿ ಹಿಮಗಾಳಿ : 9,000 ವಿಮಾನಗಳ ಹಾರಾಟ ಬಂದ್ !

Share It

ನ್ಯೂಯಾರ್ಕ್: ಅಮೇರಿಕಾದಲ್ಲಿ ಹಿಮಗಾಳಿ ವಿಪರೀತವಾಗಿ ಬೀಸುತ್ತಿದ್ದು, ಪ್ರತಿಕೂಲ ವಾತಾವರಣದ ಪರಿಣಾಮ ಸುಮಾರು 9,000 ವಿಮಾನಗಳ ಹಾರಾಟಕ್ಕೆ ತಡೆ ನೀಡಲಾಗಿದೆ.

ಕ್ರಿಸ್ಮಸ್ ಸಂದರ್ಭದಲ್ಲಿ ಸಂಭವಿಸಿರುವ ಈ ಪ್ರತಿಕೂಲ ಪರಿಷಾಮದಿಂದಾಗಿ ನ್ಯೂಯಾರ್ಕ್ ಮತ್ತು ನ್ಯೂಜೆರ್ಸಿ ಪ್ರದೇಶಗಳಲ್ಲಿ ತುರ್ತು ಪರಿಸ್ಥಿತಿ ಘೋಷಣೆ ಮಾಡಲಾಗಿದೆ. ಸುಮಾರು 9,000 ಡೊಮೆಸ್ಟಿಕ್ ವಿಮಾನಗಳ ಹಾರಟ ಸ್ಥಗಿತ ಹಾಗೂ ವಿಳಂಬವಾಗಿದೆ ಎಂದು ರಾಯಿಟರ್ಸ್‌‌‌ ಸುದ್ದಿಸಂಸ್ಥೆ ವರದಿ ಮಾಡಿದೆ.

ನ್ಯೂಯಾರ್ಕ್ ಮೆಟ್ರೋಪಾಲಿಟನ್ ಪ್ರದೇಶದಲ್ಲಿ ಹೆಚ್ಚಿನ ಹಿಮಗಾಳಿ ಸುರಿಯುತ್ತಿದ್ದು, ಜಾನ್ ಎಫ್ ಕೆನಡಿ ಇಂಟರ್ನ್ಯಾಷನಲ್ ಹಾಗೂ ಲಾಗಾರ್ಡಿಯಾ ಮತ್ತು ನ್ಯೂಯಾರ್ಕ್ ಲಿಬರ್ಟಿ ವಿಮಾನ ನಿಲ್ದಾಣಗಳಲ್ಲಿ ವಿಮಾನಗಳ ಹಾರಾಟ ಸ್ಥಗಿತವಾಗಿದೆ.


Share It

You cannot copy content of this page