ಅನುಮತಿ ಪಡೆಯದೆ ಪಾರ್ಟಿ : ಪೊಲೀಸರ ದಾಳಿ
ಬೆಂಗಳೂರು: ಪೊಲೀಸರ ಅನುಮತಿ ಪಡೆಯದೆ ಖಾಸಗಿ ರೆಸಾರ್ಟ್ ನಲ್ಲಿ ಹೊಸ ವರ್ಷದ ಪಾರ್ಟಿ ನಡೆಸುತ್ತಿದ್ದ ವೇಳೆ ಪೊಲೀಸರು ದಾಳಿ ನಡೆಸಿದ್ದಾರೆ.
ದೊಡ್ಡಬಳ್ಳಾಪುರ ತಾಲೂಕಿನ ಹೆಗ್ಗಡಿಹಳ್ಳಿ ಫಾರ್ಮ್ ಹೌಸ್ ನ ಗಾರ್ಡೇನ್ ಏರಿಯಾದಲ್ಲಿ ಪಾರ್ಟಿನಡೆಯುತ್ತಿತ್ತು. ಸುಮಾರು ನಲವತ್ತು ಯುವಕರು ಸೇರಿ ಪಾರ್ಟಿ ಹಮ್ಮಿಕೊಂಡಿದ್ದರು. ಆದರೆ, ರೆಸಾರ್ಟ್ ಮಾಲೀಕರು ಅನುಮತಿ ಪಡೆದಿರಲಿಲ್ಲ ಎನ್ನಲಾಗಿದೆ.
ದೊಡ್ಡಬಳ್ಳಾ ಪುರ ಇನ್ಸ್‌ಪೆಕ್ಟರ್ ನೇತೃತ್ವದಲ್ಲಿ ನಡೆದ ದಾಳಿಯ ವೇಳೆ ಯುವಕರನ್ನು ರೆಸಾರ್ಟ್ ನಿಂದ ಹೊರಗೆ ಕಳುಹಿಸಿ ಬೀಗ ಹಾಕಲಾಗಿದೆ. ಮಾಲೀಕರ ಮೇಲೆ ಪ್ರಕರಣ ದಾಖಲಿಸಲಾಗಿದೆ.


