ಬೆಂಗಳೂರು: ಕುಮಾರಸ್ವಾಮಿ ಜೇಬಲ್ಲೇ ಐಟಿ, ಇಡಿ ಎಲ್ರೂ ಇದ್ದಾರಲ್ಲಾ, ಕುಮಾರಸ್ವಾಮಿ ಅದೇನ್ ಮಾಡಬಹುದು ಮಾಡಲಿ ಬಿಡಿ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ವ್ಯಂಗ್ಯವಾಡಿದ್ದಾರೆ.
ಬಳ್ಳಾರಿಯ ಗಲಭೆಯಲ್ಲಿ ಗುಂಡೇಟಿನಿಂದ ಮೃತಪಟ್ಟ ಕಾಂಗ್ರೆಸ್ ಕಾರ್ಯಕರ್ತನ ಕುಟುಂಬಕ್ಕೆ ಜಮೀರ್ ಅಹಮದ್ ಅವರು 25 ಲಕ್ಷ ರು. ಪರಿಹಾರ ನೀಡಿದ ಕುರಿತ ಬಿಜೆಪಿ ಟೀಕೆಗೆ ಉತ್ತರಿಸಿದ ಅವರು, ಎಲ್ರೂ ಕುಮಾರಸ್ವಾಮಿ, ಬಿಜೆಪಿ ಕೈಲೇ ಇದ್ದಾರೆ. ತನಿಖೆ ಮಾಡಿಸ್ಲಿ ಬಿಡಿ ಎಂದು ವ್ಯಂಗ್ಯವಾಡಿದರು.
ನಾನು ಇಂದು ಬಳ್ಳಾರಿಗೆ ಭೇಟಿ ನೀಡುತ್ತಿದ್ದೇನೆ. ಅಲ್ಲಿನ ಪರಿಸ್ಥಿತಿ ಅವಲೋಕನ ಮಾಡುತ್ತೇನೆ. ಜಮೀರ್ ಅವರು ಪರಿಹಾರ ನೀಡಿರುವ ಕುರಿತು ಅವರೊಟ್ಟಿಗೆ ಮಾತನಾಡುತ್ತೇನೆ. ಕುಮಾರಸ್ವಾಮಿ ಐಟಿ, ಇಡಿಯನ್ನೆಲ್ಲ ಜೇಬಲ್ಲಿ ಇಟ್ಟುಕೊಂಡಿರುವವರ ರೀತಿ ಮಾತಾಡ್ತಾರಲ್ಲ, ಅಕ್ರಮ ಹಣ ಆದ್ರೆ ತನಿಖೆ ಮಾಡಿಸೋದಕ್ಕೆ ಹೇಳಿ ಎಂದು ಗುಡುಗಿದರು.

