ಅಂಡಮಾನ್ ಪ್ರವಾಸದಲ್ಲಿ ಹೃದಯಾಘಾತದಿಂದ ಉಪನ್ಯಾಸಕಿ ಸಾವು
ಬೆಂಗಳೂರು: ಅಂಡಮಾನ್- ನಿಕೋಬಾರ್ ಪ್ರವಾಸಕ್ಕೆ ತೆರಳಿದ್ದ ಉಪನ್ಯಾಸಕಿಯಿಬ್ಬರು ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ನಡೆದಿದೆ.
ಕರ್ನಾಟಕ ಕಾಲೇಜಿನ ಉಪನ್ಯಾಸಕಿ ಡಾ. ಅನ್ನಪೂರ್ಣ ಮೃತರು. ಇವರು ಕುಟುಂಬದ ಜತೆಗೆ ಅಂಡಮಾನ್-ನಿಕೋಬಾರ್ ಗೆ ಪ್ರವಾಸಕ್ಕೆ ತೆರಳಿದ್ಸರು.
ಕುಟುಂಬದೊಂದಿಗೆ ತೆರಳಿದ್ದರು. ಈ ವೇಳೆ ಎದೆನೋವು ಕಾಣಿಸಿಕೊಂಡು, ಆಸ್ಪತ್ರೆಗೆ ದಾಖಲಿಸಿದ್ದರು.
ಆದರೆ ಚಿಕಿತ್ಸೆ ಫಲಕಾರಿಯಾಗದೆ ಅನ್ನಪೂರ್ಣ ಮೃತಪಟ್ಟಿದ್ದಾರೆ. 45 ಉಪನ್ಯಾಸಕರು ಅವರ ಕುಟುಂಬಸ್ಥರ ಜತೆಗೆ ಅಂಡಮಾನ್ – ನಿಕೋಬಾರ್ ಪ್ರವಾಸಕ್ಕೆ ತೆರಳಿದ್ದರು. ಈ ವೇಳೆ ದುರ್ಘಟನೆ ನಡೆದಿದೆ.


