ಬೆಂಗಳೂರು: ಅಂಬೇಡ್ಕರ್ ಕೆಲವು ಸಮುದಾಯದ ನಾಯಕರಲ್ಲ, ಆಧುನಿಕ ಭಾರತದ ನಿಜ ನಿರ್ಮಾತೃ.ಆದರೆ, ಅದನ್ನು ಅರ್ಥಮಾಡಿಕೊಂಡವರ ಸಂಖ್ಯೆ ಮಾತ್ರ ಅತಿ ವಿರಳ. ಆದರೆ, ಖ್ಯಾತ ನಿರ್ದೇಶಕ ರಾಜಮೌಳಿ ಮನೆಯಲ್ಲಿ ಅಂಬೇಡ್ಕರ್ ಅವರ ದೊಡ್ಡದಾದ ಭಾವಚಿತ್ರವಿದ್ದು, ಇದೀಗ ಆ ವಿಡಿಯೋ ವೈರಲ್ ಆಗಿದೆ.
ಎಸ್.ಎಸ್. ರಾಜಮೌಳಿ ಅವರ ತಂದೆ ವಿಜಯೇಂದ್ರ ಪ್ರಸಾದ್, ಅವರ ಸಂದರ್ಶನ ಮಾಡಿದ ತೆಲುಗಿನ ಯೂಟ್ಯೂಬ್ ಚಾನೆಲ್ ನಿರೂಪಕಿ, ವಿಜಯೇಂದ್ರ ಅವರ ಮನೆಯಲ್ಲಿರುವ ಅಂಬೇಡ್ಕರ್ ಅವರ ಭಾವಚಿತ್ರದ ಬಗ್ಗೆ ಪ್ರಶ್ನಿಸಿದ್ದಾರೆ. ಇದಕ್ಕೆ ವಿಜಯೇಂದ್ರ ನೀಡಿರುವ ಉತ್ತರದ ವಿಡಿಯೋ ವೈರಲ್ ಆಗಿದೆ.
ವಿಡಿಯೋದಲ್ಲಿ ವಿಜಯೇಂದ್ರ ಪ್ರಸಾದ್, ಅಂಬೇಡ್ಕರ್ ಕೆಲವು ಸಮುದಾಯದ ಆಸ್ತಿಯಲ್ಲ. ಅವರು ಇಡೀ ಭಾರತಕ್ಕೆ ಮಹತ್ತರ ಕೊಡುಗೆ ಬೀಡಿದ್ದಾರೆ. ಅವರೆಂದರೆ ನನಗಿಷ್ಟ. ಹೀಗಾಗಿ, ಅವರ ದೊಡ್ಡ ಭಾವಚಿತ್ರವನ್ನು ನಮ್ಮ ಮನೆಯಲ್ಲಿ ಇರಿಸಿದ್ದೇನೆ ಎಂದಿದ್ದಾರೆ. ಈ ವಿಡಿಯೋಗೆ ಲಕ್ಷಾಂತರ ವೀಕ್ಷಣೆಗಳು ಸಿಕ್ಕಿದ್ದು, ವಿಡಿಯೋ ಇದೀಗ ಸಾಮಾಜಿಕ ತಾಣದ ಟ್ರೆಂಡ್ ಎನಿಸಿದೆ.