ಅಪರಾಧ ಸುದ್ದಿ

ಅಮೇರಿಕ ಸೈನಿಕರ ಸಾವಿಗೆ ಪ್ರತಿಕಾರಕ್ಕೆ ಸಿದ್ಧ : ಇರಾನ್ ಮೇಲಿನ ದಾಳಿ ನಿಲ್ಲಿಸುವುದಿಲ್ಲ ಎಂದ ಟ್ರಂಪ್

Share It

ನ್ಯೂಯಾರ್ಕ್​(ಅಮೆರಿಕ): ನಮ್ಮ ಎಲ್ಲ ಉದ್ದೇಶ ಸಾಧಿಸುವವರೆಗೂ ಇರಾನ್ ವಿರುದ್ಧದ ಅತ್ಯಂತ ಅಗಾಧ ಮಿಲಿಟರಿ ದಾಳಿ ‘ಆಪರೇಷನ್ ಎಪಿಕ್ ಫ್ಯೂರಿ’ ಪೂರ್ಣ ಬಲದೊಂದಿಗೆ ಮುಂದುವರೆಯುತ್ತದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ಅಮೆರಿಕ-ಇಸ್ರೇಲ್ ಭಾನುವಾರ ಇರಾನ್‌ನಾದ್ಯಂತ ನಿರ್ದಿಷ್ಟ ಗುರಿಗಳ ಮೇಲೆ ದಾಳಿ ನಡೆಸಿ, ಅಲ್ಲಿನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಹತ್ಯೆ ಮಾಡಿದ ಬಳಿಕ ಕಾರ್ಯಾಚರಣೆ ಇನ್ನಷ್ಟು ತೀವ್ರಗೊಂಡಿದೆ. ಇರಾನ್​​ನ ಬ್ಯಾಲಿಸ್ಟಿಕ್ ಕ್ಷಿಪಣಿ ತಾಣಗಳ ಮೇಲೆ ಬೃಹತ್ ಬಾಂಬ್‌ಗಳನ್ನು ಪ್ರಯೋಗಿಸಿ ಯುದ್ಧನೌಕೆಗಳನ್ನು ನಾಶಮಾಡಲಾಗಿದೆ.

ಪ್ರತಿಯಾಗಿ, ಇಸ್ರೇಲ್ ಮತ್ತು ಕೊಲ್ಲಿ ಭಾಗದ ಸುತ್ತಮುತ್ತಲಿನ ಯುಎಸ್ ಮಿಲಿಟರಿ ನೆಲೆಗಳ ಮೇಲೆ ಮತ್ತು ಸೌದಿ ರಾಜಧಾನಿ ಮತ್ತು ಜಾಗತಿಕ ವ್ಯಾಪಾರ ಕೇಂದ್ರವಾದ ದುಬೈ ಮೇಲೆ ಇರಾನ್ ಕ್ಷಿಪಣಿಗಳು ಮತ್ತು ಡ್ರೋನ್‌ಗಳನ್ನು ಹಾರಿಸುವ ಮೂಲಕ ಪ್ರತೀಕಾರ ತೀರಿಸಿಕೊಂಡಿತ್ತು.
ಸಾಮಾಹಿಕ ಜಾಲತಾಣ ಟ್ರೂಥ್​ನಲ್ಲಿ ಪೋಸ್ಟ್ ಮಾಡಲಾದ ವಿಡಿಯೋದಲ್ಲಿ, ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇರಾನ್ ಮೇಲೆ ಆರಂಭಿಸಿರುವ ಯುದ್ಧದಲ್ಲಿ ಮೃತಪಟ್ಟ ಮೂರು ಯುಎಸ್ ಸೈನಿಕರ ಸಾವಿಗೆ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಪ್ರತಿಜ್ಞೆ ಮಾಡಿದ್ದಾರೆ. ಅಲ್ಲದೇ, ಯುದ್ಧ ಕೊನೆಗೊಳ್ಳುವ ಮುನ್ನ ಹೆಚ್ಚಿನ ಸಾವು-ನೋವುಗಳ ಸಾಧ್ಯತೆಯಿದೆ ಎಂದು ಹೇಳಿದ್ದಾರೆ.


Share It

You cannot copy content of this page