ರಾಜಕೀಯ ಸುದ್ದಿ

ಇನ್ನಷ್ಟು ಅನಾಹುತ ಆಗುವ ಮೊದಲು ವಿಶ್ವದ ನಾಯಕರು ಯುದ್ಧ ನಿಲ್ಲಿಸಬೇಕು: ಚೀನಾ, ರಷ್ಯಾ ಕಾದು ನೋಡುತ್ತಿವೆ: ಬಸವರಾಜ ಬೊಮ್ಮಾಯಿ

Share It

ಬೆಂಗಳೂರು: ಇಸ್ರೇಲ್ ಇರಾನ್ ಮೇಲೆ ಯುದ್ಧ ಮಾಡುತ್ತಿದ್ದು, ಇರಾನ್ ಪ್ರತ್ಯುತ್ತರ ನೀಡುತ್ತಿರುವುದು ದೊಡ್ಡ ಆತಂಕವಾಗಿದೆ. ಇನ್ನಷ್ಟು ಅನಾಹುತ ಆಗುವ ಮೊದಲು ವಿಶ್ವದ ನಾಯಕರು ಯುದ್ಧ ನಿಲ್ಲಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಮನವಿ ಮಾಡಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈಗ ನಡೆಯುತ್ತಿರುವ ಯುದ್ದದಲ್ಲಿ ಇಸ್ರೇಲ್ ಮಾತ್ರವಲ್ಲ, ಅಮೇರಿಕಾ‌ ಕೂಡ ಅದರ ಹಿಂದಿದೆ. ಮಧ್ಯಪ್ರಾಚ್ಯ ಇಡೀ ವಿಶ್ವದ ಆರ್ಥಿಕ ಮತ್ತು ಸಾಂಸ್ಕೃತಿಕ ಪ್ರದೇಶ. ಅಲ್ಲಿ ಹಲವು ಯುದ್ಧಗಳನ್ನು ಕಂಡಿದ್ದೇವೆ. ಮೊದಲು ಜರಸಲೇಮ್ (ಧರ್ಮಕ್ಕಾಗಿ) ಗಾಗಿ ಯುದ್ಧ ನಡೆಯುತಿತ್ತು. ಈಗ ಪೆಟ್ರೋಲಿಯಂ, ಧಾರ್ಮಿಕ ವಿಚಾರಕ್ಕೆ ಯುದ್ಧ ಅಗುತ್ತಿದೆ. ಅಮೇರಿಕಾ ಆಯಿಲ್ ಮೇಲೆ ಹಿಡಿತ ಸಾಧಿಸಲು ಹೋರಾಟ ಮಾಡುತ್ತಿದೆ. ಅಮೇರಿಕಾ ಯಾರ ಮಾತನ್ನೂ ಕೇಳುವ ಪರಿಸ್ಥಿತಿಯಲ್ಲಿ ಇಲ್ಲ ಎಂದು ಹೆಳಿದರು.

ಮೂರನೇ ವಿಶ್ವ ಯುದ್ಧ ಆಗುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಮೂರನೇ ವಿಶ್ವ ಯುದ್ದ ಆಗಲು ಚೀನಾ ಮತ್ತು ರಷ್ಯಾ ಇನ್ನೂ ಯುದ್ದಕ್ಕೆ ಇಳಿದಿಲ್ಲ. ಕಾದು ನೋಡುವ ತಂತ್ರ ಮಾಡುತ್ತಿವೆ. ಅವರೂ ಯುದ್ದ ರಂಗಕ್ಕೆ ಇಳಿದರೆ ಬಹಳ‌ ದೊಡ್ಡ ಮಟ್ಟಕ್ಕೆ ಹೋಗಲಿದೆ. ದೊಡ್ಡ ಅನಾಹುತ ಆಗುವ ಮೊದಲು ವಿಶ್ವದ ನಾಯಕರು ಯುದ್ಧ ನಿಲ್ಲಿಸಬೇಕು ಎಂದು ಹೇಳಿದರು.

ಯುಎಇಯಲ್ಲಿ ಕನ್ನಡಿಗರು ಸಿಲುಕಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಹಲವು ಯುದ್ಧಗಳ ಸಂಧರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಭಾರತೀಯರನ್ನು ಸುರಕ್ಷಿತವಾಗಿ ಕರೆತಂದಿದ್ದಾರೆ. ಶಾಂತಿ ನೆಲೆಸಿದ ಬಳಿಕ ಕರೆ ತರಬಹುದು. ದುಬೈ, ಅಬುದಾಬಿ, ಸೌಧಿ ಅರೇಬಿಯಾ ಒಂದೇ ಬಾರಿ ಯುದ್ಧ ನಡೆಯುತ್ತಿದೆ ಹಾಗಾಗಿ ಒಟ್ಟಿಗೆ ಸಮಸ್ಯೆ ಆಗಿದೆ. ಎಲ್ಲಾ ಕಡೆ ಭಾರತೀಯರು ಇದ್ದಾರೆ. ಭಾರತ ಸರ್ಕಾರ ಮಹತ್ವದ ಪಾತ್ರವಿದೆ. ಭಾರತ ಸರ್ಕಾರ ಎಲ್ಲಾ ರಾಯಭಾರಿ ಕಚೇರಿಗೆ ಸಂಪರ್ಕ ಮಾಡಿ. ಅವರಿಗೆ ಅನ್ನ, ವಸತಿ ನೀಡುವ ಬಗ್ಗೆ ಕ್ರಮ ಆಗಬೇಕು.

ಭಾರತ ತನ್ನ ಆಯಿಲ್ ರಿಸೋರ್ಸ್ ಮೇಲೆ ಅವಲಂಭಿತವಾಗಿತ್ತು. ಹಾಗಾಗಿ ಭಾರತದ ಮೇಲೂ ಪರಿಣಾಮ ಬೀರಲಿದೆ. ಹತ್ತು ವರ್ಷಗಳ ಹಿಂದೆ ಆಯಿಲ್‌ಗಾಗಿ ಕ್ಯೂ ನಿಂತಿತ್ತು.  ಮತ್ತೆ ಅಂತದ್ದೇ ಪರಿಸ್ಥಿತಿ ಬರಬಹುದು. ಪಾಕಿಸ್ತಾನ ಸೇರಿದಂತೆ ಬೇರೆ ಬೇರೆ ದೇಶಗಳಲ್ಲಿ ಆಗಿರುವ ಹಿಂಸೆ ನೋಡಿದರೆ ಭಾರತದಲ್ಲಿ ಅಂತ ಹಿಂಸೆ ಆಗಿಲ್ಲ‌. ಪಾಕಿಸ್ತಾನದಲ್ಲಿ ಗೋಲಿಬಾರ್ ಆಗಿತ್ತು. ಭಾರತದಲ್ಲಿ ಆ ರೀತಿ ಆಗಲು ಅವಕಾಶ ಇಲ್ಲ ಎಂದು ಹೇಳಿದರು.


Share It

You cannot copy content of this page