ಅಪರಾಧ ಸುದ್ದಿ

ಹಾಸನ: ಮದುವೆ ಮಾಡಿಲ್ಲವೆಂದು ತಾಯಿಯನ್ನೇ ಕಲ್ಲಿನಿಂದ ಕೊಚ್ಚಿ ಕೊಲೆ ಮಾಡಿದ ಪಾಪಿ ಮಗ !

Share It

ಚನ್ನರಾಯಪಟ್ಟಣ :ಮದುವೆ ಮಾಡಿಲ್ಲವೆಂದು ತಾಯಿಯನ್ನು ಸ್ವತಃ ಮಗನೇ ಹತ್ಯೆಗೈದಿರುವ ಘಟನೆ ಚನ್ನರಾಯಪಟ್ಟಣ ತಾಲೂಕಿನ ಶ್ರವಣಬೆಳಗೊಳದ ಶ್ರೀಕಂಠನಗರದಲ್ಲಿ ಜರುಗಿದೆ.

ಹಲವು ವರ್ಷಗಳಿಂದ ಮದುವೆ ಮಾಡಿಸಿಲ್ಲವೆಂದು ಒತ್ತಾಯಿಸುತ್ತಿದ್ದು, ಜಗಳ ತೆಗೆದ ಮಗ ತಾಯಿಯ ತಲೆಗೆ ಕಲ್ಲಿನಿಂದ ಹಲ್ಲೆಮಾಡಿದ್ದು ಹಾಸನದ ಹಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ತಾಯಿ ಗಂಗಮ್ಮ ಸಾವನಪಿದ್ದಾರೆ ಎನ್ನಲಾಗಿದೆ.

ಗಂಗಮ್ಮ ಪುತ್ರ ಉಮಾಶಂಕರ್ ಬೆಂಗಳೂರಿನಲ್ಲಿ ವಾಸವಾಗಿದ್ದರು. ಒಮ್ಮೆ ಆತನಿಗೆ ಅಪಘಾತವಾಗಿದ್ದು ತಲೆಗೆ ಪೆಟ್ಟು ಬಿದ್ದ ಬಳಿಕ ಅವನ ವರ್ತನೆ ಬದಾಲಾಗಿರುತ್ತು. ಹೀಗಾಗಿ, ಆತನ ಮದುವೆಗೆ ಕುಟುಂಬಸ್ಥರು ಅಷ್ಟೊಂದು ತಲೆ ಕೆಡಿಸಿಕೊಂಡಿರಲಿಲ್ಲ.

ಆದರೆ, ಮಾರ್ಚ್ ೨೬ ರಂದು ಮನೆಯಲ್ಲಿ ಕುಟುಂಬದಲ್ಲಿ ಜಗಳ ಉಂಟಾಗಿರುತ್ತದೆ. ಆ ಜಗಳದ ನಡುವೆ ರೊಚ್ಚಿಗೆದ್ದ ಯುವಕ ಕಲ್ಲಿನಿಂದ ತಾಯಿಯಾದ ಗಂಗಮ್ಮನ ತಲೆಗೆ ಹೋಡೆದು ಗಾಯಗೊಳಿಸಿರುತ್ತಾನೆ. ಗಂಭೀರವಾಗಿಗಾಯಗೊಂಡಿದ್ದ ಗಂಗಮ್ಮನನ್ನು ಹಾಸನ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ,ಚಿಕಿತ್ಸೆ ಫಲಕಾರಿಯಾಗಲಿಲ್ಲ ಎಂದು ಹೇಳಲಾಗಿದೆ. ಈ ಸಂಬಂಧ ಶ್ರವಣಬೆಳಗೊಳ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.


Share It

You cannot copy content of this page