ಕ್ರೀಡೆ ಸುದ್ದಿ

ಗುಜರಾತ್‌ ತಂಡದ ವಿರುದ್ಧದ ಪಂದ್ಯದಲ್ಲಿ ಅರ್ಜುನ್ ತೆಂಡೂಲ್ಕರ್ ಪಾದಾರ್ಪಣೆ ಮಾಡ್ತಾರಾ?

Share It

ಬೆಂಗಳೂರು: ಲಕ್ನೋದಲ್ಲಿ ಗುಜರಾತ್ ಟೈಟನ್ ತಂಡದ ವಿರುದ್ಧದ ಪಂದ್ಯದಲ್ಲಿ ಅರ್ಜುನ್ ತೆಂಡೂಲ್ಕರ್ ಪಾದಾರ್ಪಣೆ ಮಾಡಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

ಅರ್ಜುನ್ ತೆಂಡೂಲ್ಕರ್ 2021 ರಿಂದ ಮುಂಬೈ ಇಂಡಿಯನ್ಸ್ ತಂಡದಲ್ಲಿದ್ದರೂ ಒಂದೂ IPL ಪಂದ್ಯವನ್ನಾಡಿಲ್ಲ. ಇದೀಗ ಅವರು ಲಕ್ನೋ ಸೂಪರ್ ಜೆಂಟ್ಸ್ ತಂಡದ ಭಾಗವಾಗಿದ್ದು, ಎಡಗೈ ವೇಗದ ಬೌಲರ್ ಆಗಿ ಸತತ ಅಭ್ಯಾಸ ನಡೆಸುತ್ತಿದ್ದಾರೆ. ಆದರೆ ಅವರಿಗೆ ಈವರೆಗೆ ಪಾದಾರ್ಪಣೆ ಅವಕಾಶ ಸಿಕ್ಕಿರಲಿಲ್ಲ.

ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್ ಅವರ ಪುತ್ರ ಎಂಬ ಕಾರಣಕ್ಕೆ ಮುಂಬಯಿ ತಂಡ ಅವರನ್ನು ಖರೀದಿಸಿದೆ ಡಂಬ ಆರೋಪ ಕೇಳಿಬಂದಿತ್ತು. ಆದರೆ, ಆಡುವ ಅವಕಾಶವನ್ನೇ ಕೊಟ್ಟಿರಲಿಲ್ಲ. ಇದೀಗ ಲಕ್ನೋ ತಂಡದ ಸೆಟ್ಸ್ ನಲ್ಲಿ ಬೆವರು ಹರಿಸುತ್ತಿರುವ ಅರ್ಜುನ್, ತಂದೆಯ ನೆರಳಲ್ಲದೆ ತನ್ನ ಪ್ರತಿಭೆಯಿಂದ ಆಡಬಲ್ಲೇ ಎಂಬುದನ್ನು ನಿರೂಪಿಸುತ್ತಿದ್ದಾರೆ.

ನೆಟ್ಸ್ ನಲ್ಲಿ ನಡೆಸುತ್ತಿರುವ ಅಭ್ಯಾಸ, ತೆಗೆಯುತ್ತಿರುವ ವಿಕೆಟ್ ಗಳ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ನೆಫೋಟಿಸಮ್ ಕಿಡ್ ಎಂಬ ಹಣೆಪಟ್ಟಿಯ ನಡುವೆಯೂ ಅವರು ತಂಡದ ವಾಟರ್ ಬಾಯ್ ಆಗಿ ಕೆಲಸ ಮಾಡಿದ ವಿಡಿಯೋವೊಂದು ಇತ್ತೀಚೆಗೆ ಜಾಲತಾಣ್ ಟ್ರೆಂಡ್ ಆಗಿತ್ತು.

ಲಕ್ನೋ ಪಂದ್ಯಕ್ಕೆ ಸಚ್ಚಿನ್ ಪತ್ನಿ ಅಂಜಲಿ ತೆಂಡೂಲ್ಕರ್ ಮತ್ತು ಸಹೋದರು ಸಾರಾ ಆಗಮಿಸಿದ ವಿಡಿಯೋ ವೈರಲ್ ಆದ ಬೆನ್ನಲ್ಲೇ ಅರ್ಜುನ್ ಪಾದಾರ್ಪಣೆ ಮಾಡುವ ವದಂತಿಗೆ ರೆಕ್ಕೆ ಪುಕ್ಕ ಬಂದಿದೆ. ಪಾದಾರ್ಪಣೆ ಪಂದ್ಯ ವೀಕ್ಷಣೆಯ ಸಲುವಾಗಿಯೇ ಇಬರಿಬ್ಬರು ಲಕ್ನೋಗೆ ಬಂದಿದ್ದಾರೆ ಎಂಬ ಚರ್ಚೆ ಆರಂಭವಾಗಿದೆ. ಇಂದು ಪಂದ್ಯ ನಡೆಯಲಿದ್ದು, ಅರ್ಜುನ್ ತೆಂಡೂಲ್ಕರ್ ಪಾದಾರ್ಪಣೆ ಮಾಡಲಿದ್ದಾರಾ ಎಂದು ಕಾದು ನೋಡಬೇಕಿದೆ.


Share It

You cannot copy content of this page