14 ಮೂಡಾ ನಿವೇಶನಗಳ ಖಾತೆ ರದ್ದುಪಡಿಸಿದ ಸಿಎಂ ಪತ್ನಿ ಪಾರ್ವತಿ ಸಿದ್ದರಾಮಯ್ಯ

Share It

ಮೈಸೂರು: ಸಿಎಂ ಪತ್ನಿ ಪಾರ್ವತಿ ಅವರು ತಮ್ಮ 14 ನಿವೇಶನಗಳನ್ನು ವಾಪಸ್ ನೀಡಿದ್ದು, ಸ್ವತಃ ಸಬ್ ರಿಜಿಸ್ಟ್ರಾರ್ ಕಚೇರಿಗೆ ಭೇಟಿ ನೀಡಿದ ಖಾತೆ ರದ್ದುಪಡಿಸಿದ್ದಾರೆ.

ತಮ್ಮ‌ಪತಿಯ ವಿರುದ್ಧ ರಾಜಕೀಯ ಪಿತೂರಿ ನಡೆಯುತ್ತಿರುವ ಕಾರಣಕ್ಕೆ ಮನನೊಂದು ತಮಗೆ 3.16 ಎಕರೆ ಜಾತಕ್ಕೆ ಪ್ರತಿಯಾಗಿ ನೀಡಿದ್ದ 14 ನಿವೇಶನಗಳನ್ನು ರದ್ದುಗೊಳಿಸಿರುವುದಾಗಿ ಸಿಎಂ ಪತ್ನಿ ಪಾರ್ವತಿ ಅವರು ತಿಳಿಸಿದ್ದಾರೆ.

ಕೆಸರೆ ಗ್ರಾಮದಲ್ಲಿ ಸಿಎಂ ಪತ್ನಿ ಪಾರ್ವತಿ ಅವರಿಗೆ ಬಂದಿದ್ದ 3.16 ಎಕರೆ ಜಾಗವನ್ನು ಮೂಡಾ ವಶಪಡಿಸಿಕೊಂಡು, ಅದಕ್ಕೆ ಬದಲಾಗಿ ವಿಜಯನಗರ 3 ಮತ್ತು 4 ನೇ ಹಂತದಲ್ಲಿ14 ನಿವೇಶನಗಳನ್ನು ನೀಡಲಾಗಿತ್ತು. ಇದೀಗ ವಿವಾದದ ಹಿನ್ನೆಲೆಯಲ್ಲಿ ಸಿಎಂ ಪತ್ನಿ ಪಾರ್ವತಿ ಅವರು, ತಮ್ಮ 14 ನಿವೇಶನಗಳನ್ನು ವಾಪಸ್ ಮಾಡಿದ್ದಾರೆ.


Share It

You May Have Missed

You cannot copy content of this page