ಸಮರ್ಪಕ ವಿದ್ಯುತ್ ಪೂರೈಕೆಗಾಗಿ ಒತ್ತಾಯಿಸಿ ವಿವಿಧ ಗ್ರಾಮಗಳ ರೈತರು ಹೊಳಲ್ಕೆರೆ ತಾಲ್ಲೂಕಿನ ಚಿಕ್ಕಜಾಜೂರು ಬೆಸ್ಕಾಂ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಚಿಕ್ಕಜಾಜೂರು ಬಳಿಯ ಟಿ.ತಿರುಮಲಾಪುರ, ಅಮೃತಾಪುರ, ಗೌರಿಪುರ, ಕಾಶಿಪುರ, ಬಿಜ್ಜೇನಾಳ್, ಲಿಂಗೇನಹಳ್ಳಿ ಮುಂತಾದ ಗ್ರಾಮಗಳಿಗೆ ಕಳೆದ 15 ದಿನಗಳಿಂದ ಸಮರ್ಪಕ ವಿದ್ಯುತ್ ಪೂರೈಕೆಯಾಗುತ್ತಿಲ್ಲ, ಇದರಿಂದ ಈ ಗ್ರಾಮಗಳ ಸುತ್ತಮುತ್ತಲಿನ ರೈತರ ತೋಟಗಳು ಪಂಪ್ ಸೆಟ್ ನೀರಿಲ್ಲದೆ ಬೇಸಿಗೆಯ ಭಾರಿ ತಾಪಮಾನ ತಾಳಲಾರದೆ ಒಣಗುತ್ತಿವೆ.
ಈ ಬಗ್ಗೆ ನಾವು ಎಷ್ಟು ಬಾರಿ ಚಿಕ್ಕಜಾಜೂರು ಬೆಸ್ಕಾಂ ಕಚೇರಿಗೆ ಬಂದು ಮನವಿ ಮಾಡಿಕೊಂಡರೂ ಇಲ್ಲಿನ ಇಂಜಿನಿಯರ್ ಗಳು ಸ್ಪಂದಿಸಿ ನಮ್ಮ ಒಣಗುತ್ತಿರುವ ತೋಟಗಳಿಗೆ ಪಂಪ್ ಸೆಟ್ ನಿಂದ ನೀರು ಹಾಯಿಸಲು ವಿದ್ಯುತ್ ಪೂರೈಸಲು ಮುಂದಾಗಿಲ್ಲ ಎಂದು ರೈತರು ಭಾರಿ ಆಕ್ರೋಶ ವ್ಯಕ್ತಪಡಿಸಿದರು.