ರಾಜಕೀಯ ಸುದ್ದಿ

ಗೃಹ ಸಚಿವ ಪರಮೇಶ್ವರ್ ಸಿಎಂ ಆಗಲಿದ್ದಾರಂತೆ

Share It

ತುಮಕೂರು: ರಾಜ್ಯದ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ರಾಜ್ಯದ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಗೊರವಯ್ಯ ಭವಿಷ್ಯ ನುಡಿದಿರುವುದು ಅಚ್ಚರಿಗೆ ಕಾರಣವಾಗಿದೆ.

ಗೊರವಯ್ಯನ ಈ ಅಚ್ಚರಿ ಭವಿಷ್ಯದಿಂದ ರಾಜ್ಯ ರಾಜಕೀಯ ಮತ್ತೊಂದು ಸುತ್ತಿನ ಹೈಡ್ರಾಮಾಗಳಿಗೆ ಇಂಬು ನೀಡಿದಂತಾಗಿದೆ. ಆದ್ರೆ ಈ ರೀತಿ ಭವಿಷ್ಯ ನುಡಿದಿರುವುದು ಗೊರವಯ್ಯನ ವೇಷ ತೊಟ್ಟ ಕಾಂಗ್ರೆಸ್ ನ ಸದಸ್ಯ, ವಕ್ತಾರ ನಿತೀಶ್ ರಾಜ್ ಮೌರ್ಯ ಎಂಬುದು ಗಮನಾರ್ಹ.

ಹೌದು, ತುಮಕೂರು ನಗರದ ಖಾಸಗಿ ಕಾರ್ಯಕ್ರಮಕ್ಕೆ ಅತಿಥಿಯಾಗಿ ಗೃಹಸಚಿವ ಪರಮೇಶ್ವರ್ ಅವರು ಆಗಮಿಸಿದ್ದ ವೇಳೆ ಈ ಘಟನೆ ನಡೆದಿದ್ದು, ನಿಮಗೆ ಸಿಎಂ ಆಗುವ ಯೋಗವಿದೆ ಎಂದು ಭವಿಷ್ಯ ನುಡಿದಿರುವ ಗೊರವಯ್ಯ ವೇಷಧಾರಿ ನಿತೀಶ್ ರಾಜ್ ಮೌರ್ಯ ಗೃಹಸಚಿವರಿಗೆ ಶುಭ ಹಾರೈಸಿದ್ದಾರೆ. ಗೊರವಯ್ಯನ ಈ ಭವಿಷ್ಯ ಕೇಳಿ ಗೃಹ ಸಚಿವ ಪರಮೇಶ್ವರ್ ಸಂತಸ ವ್ಯಕ್ತಪಡಿಸಿದ್ದಾರೆ.


Share It

You cannot copy content of this page