ನೆಲಮಂಗಲ: ಸಾರಿಗೆ ಬಸ್ ಹಾಗೂ ಆಟೋ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಮೂವರು ಜನ ಸ್ಥಳದಲ್ಲೇ ಸಾವನಪ್ಪಿರುವ ಘಟನೆ ಬೆಂಗಳೂರು ಗ್ರಾ. ಜಿಲ್ಲೆಯ ನೆಲಮಂಗಲದ ಮಲ್ಲರ ಬಾಣವಾಡಿಯಲ್ಲಿ ನಡೆದಿದೆ.
KSRTC ಬಸ್ ಬೆಂಗಳೂರು ನಿಂದ ಹೊರನಾಡಿಗೆ ತೆರಳುತ್ತಿದ್ದ ವೇಳೆ ಆಟೋಗೆ ಡಿಕ್ಕಿಯಾಗಿದೆ. ಆಟೋದಲ್ಲಿ ಒಂದೇ ಕುಟುಂಬದ 6 ಜನರು ತೆರಳುತ್ತಿದ್ದರು. ಘಟನೆಯಲ್ಲಿ ಆಟೋ ಚಾಲಕ ಶ್ರೀನಿವಾಸ (40), ಪುಟ್ಟಮ್ಮ (55), ವರ್ಷಿಣಿ (13) ಸ್ಥಳದಲ್ಲಿ ಸಾವನ್ನಪ್ಪಿದ್ದಾರೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.