ಬೆಂಗಳೂರು: ಬಿಜೆಪಿ ಎಂ ಎಲ್ ಸಿ ಎನ್. ರವಿಕುಮಾರ್ ವಿರುದ್ಧದ ಪ್ರಕರಣದಲ್ಲಿ ಯಾವುದೇ ಬಲವಂತದ ಕ್ರಮ ಬೇಡ ಎಂದು ಪೊಲೀಸ್ ಇಲಾಖೆಗೆ ಹೈಕೋರ್ಟ್ ಸೂಚನೆ ನೀಡಿದೆ.
ಕಲಬುರಗಿ ಠಾಣೆಯಲ್ಲಿ ದಾಖಲಾಗಿರುವ ಕೇಸ್ ರದ್ದು ಕೋರಿ ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಏಕಸದಸ್ಯ ಪೀಠ ಈ ಮಹತ್ವದ ತೀರ್ಪು ನೀಡಿದೆ. ಇದೇ ಸಂದರ್ಭದಲ್ಲಿ ವಿಚಾರಣೆಗೆ ಸಹಕರಿಸುವಂತೆಯೂ ಎನ್. ರವಿಕುಮಾರ್ ಅವರಿಗೆ ಸೂಚನೆ ನೀಡಿದೆ.
ಕಲಬುರಗಿ ಡಿಸಿ ಅವರನ್ನು ಪಾಕಿಸ್ತಾನದಿಂದ ಬಂದವರಂತೆ ಆಡುತ್ತಿದ್ದಾರೆ ಎಂದಿದ್ದಲ್ಲದೆ,
ಕೆಲ ಪೊಲೀಸರನ್ನು ಸಹ ನಿಂದಿಸಲಾಗಿತ್ತು. ಹೀಗಾಗಿ, ಅಟ್ರಾಸಿಟಿ ಕಾಯಿದೆ ಅಡಿ ಅವರ ವಿರುದ್ಧ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ವಿಚಾರಣೆಗೆ ಹಾಜರಾಗುವಂತೆ ರವಿಕುಮಾರ್ ಅವರಿಗೆ ನೊಟೀಸ್ ನೀಡಲಾಗಿತ್ತು.
ಕಲಬುರಗಿ ಎ ವಿಭಾಗದ ಡಿವೈಎಸ್ಪಿ ಮುಂದೆ ಅವರು ವಿಚಾರಣೆಗೆ ಹಾಕರಾಗಬೇಕಿದ್ದು, ವಿಚಾರಣೆಗೆ ಹಾಜರಾಗಿರಲಿಲ್ಲ. ಹೀಗಾಗಿ, ಅವರನ್ನು ಬಂಧಿಸುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಕಾರ್ಯಪ್ರವೃತ್ತವಾಗಿತ್ತು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಅವರು ಹೈಕೋರ್ಟ್ ಮೊರೆ ಹೋಗಿದ್ದು, ಹೈಕೋರ್ಟ್ ಬಿಗ್ ರಿಲೀಫ್ ನೀಡಿದೆ.