IPS ಅಧಿಕಾರಿ ಡಿ. ರೂಪಾ BMTF ಎಡಿಜಿಪಿ: ಸೀಮಂತ್ ಕುಮಾರ್ ಸಿಂಗ್ ಜಾಗಕ್ಕೆ ವರ್ಗಾವಣೆ

Share It

ಬೆಂಗಳೂರು: ಬೆಂಗಳೂರು ಪೊಲೀಸ್ ಆಯುಕ್ತರ ಹುದ್ದೆಗೆ ವರ್ಗಾವಣೆಯಾದ ಸೀಮಂತ್ ಕುಮಾರ್ ಸಿಂಗ್ ಅವರ BMTF ಎಡಿಜಿಪಿ ಸ್ಥಾನಕ್ಕೆ IPS ಅಧಿಕಾರಿ ಡಿ. ರೂಪಾ ಅವರನ್ನು ವರ್ಗಾವಣೆ ಮಾಡಲಾಗಿದೆ.

ಡಿ.ರೂಪಾ ಅವರಿಗೆ ಇತ್ತೀಚೆಗಷ್ಟೇ ಸರಕಾರ ಎಡಿಜಿಪಿ ಹುದ್ದೆಗೆ ಪದೋನ್ನತಿ ನೀಡಿತ್ತು. ಈ ಹಿನ್ನೆಲೆಯಲ್ಲಿ ಕರ್ನಾಟಕ ಸಿಲ್ಕ್ ಮಾರ್ಕೆಟಿಂಗ್ ಬೋರ್ಡ್ ನ ಎಂಡಿಯಾಗಿದ್ದ ಅವರನ್ನು BMTF ಎಡಿಜಿಪಿ ಹುದ್ದೆಗೆ ವರ್ಗಾವಣೆ ಮಾಡಲಾಗಿದೆ.

ಜತೆಗೆ BMTF ಎಡಿಜಿಪಿ ಹುದ್ದೆಯನ್ನು ಎಡಿಜಿಪಿ ಆಡಳಿತ ಹುದ್ದೆಗೆ ಸಮಾನಾಂತರ ಎಂದು ಸರಕಾರ ಘೋಷಿಸಿದೆ. ಸರಕಾರ ರೂಪಾ ಅವರನ್ನು ಕಳೆದ ಕೆಲವು ದಿನಗಳಿಂದ IPS ಹೊರತುಪಡಿಸಿದ ಹುದ್ದೆಗಳಲ್ಲಿ ನೇಮಿಸಿತ್ತು. ಇದೀಗ ಅವರಿಗೆ ಪದೋನ್ನತಿ ನೀಡಿ ಎಡಿಜಿಪಿ ಹುದ್ದೆ ನೀಡಿದೆ.


Share It
Previous post

ಇಂದಿನ ಕ್ಯಾಬಿನೆಟ್ ನಲ್ಲಿ ಜಾತಿ ಗಣತಿಯದ್ದೇ ಚರ್ಚೆ: ಮರು ಸಮೀಕ್ಷೆಗೆ ಬಹುತೇಕರ ವಿರೋಧ

Next post

ಕಾಲ್ತುಳಿತ ದುರಂತ; ಮಧ್ಯಪ್ರವೇಶಿಸಿ ನ್ಯಾಯ ದೊರಕಿಸಿಕೊಡುವಂತೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕ್ಕೆ ಪ್ರತಿಪಕ್ಷ ನಾಯಕ ಆರ್‌.ಅಶೋಕ ಮನವಿ

You May Have Missed

You cannot copy content of this page