ಅಪರಾಧ ಸುದ್ದಿ

ಬೈಕ್ ಕದ್ದು ವೀಲಿಂಗ್: ಆರೋಪಿಯ ಬಂಧನ

Share It

ಬೆಂಗಳೂರು : ಬೈಕ್, ಸ್ಕೂಟರ್‌ಗಳನ್ನ ಕಳ್ಳತನ ಮಾಡಿ ವೀಲಿಂಗ್ ಮಾಡುತ್ತಿದ್ದ ಆರೋಪಿಯನ್ನ ಸಿದ್ದಾಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ವಿಲ್ಸನ್ ಗಾರ್ಡನ್ ನಿವಾಸಿ ಸಲೀಂ ಪಾಷಾ (24) ಬಂಧಿತ ಆರೋಪಿ. ಆತನಿಂದ ರೂ. 18 ಲಕ್ಷ ಮೌಲ್ಯದ 20 ದ್ವಿಚಕ್ರ ವಾಹನ ಹಾಗೂ 1 ಆಟೋ ರಿಕ್ಷಾ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ದ್ವಿಚಕ್ರ ವಾಹನಗಳ ಹ್ಯಾಂಡಲ್ ಲಾಕ್ ಮುರಿದು ಕಳ್ಳತನ ಮಾಡುತ್ತಿದ್ದ ಆರೋಪಿ, ಅವುಗಳನ್ನ ಬಳಸಿ ವೀಲಿಂಗ್ ಮಾಡಿ, ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್​ ಮಾಡುತ್ತಿದ್ದ. ನಂತರ ಆ ದ್ವಿಚಕ್ರ ವಾಹನಗಳನ್ನ ಅಜ್ಞಾತ ಸ್ಥಳಗಳಲ್ಲಿ ಪಾರ್ಕ್ ಮಾಡುತ್ತಿದ್ದ.

ಮನೆಗೆ ಹೋದರೆ ಪೊಲೀಸರು ಹುಡುಕಿಕೊಂಡು ಬರಬಹುದು ಎಂದು ಕದ್ದ ಆಟೋದಲ್ಲಿಯೇ ವಾಸ್ತವ್ಯ ಹೂಡಿದ್ದ. ಇತ್ತೀಚಿಗೆ ಜಯನಗರ 2 ನೇ ಬ್ಲಾಕ್‌ನ ಆರ್. ವಿ. ಟೀಚರ್ಸ್ ಕಾಲೋನಿಯಲ್ಲಿ ಮನೆ ಮುಂದೆ ನಿಲ್ಲಿಸಿದ್ದ ದ್ವಿಚಕ್ರ ವಾಹನವೊಂದನ್ನು ಕಳ್ಳತನ ಮಾಡಿದ್ದ.

ದ್ವಿಚಕ್ರ ವಾಹನದ ಮಾಲೀಕ ನೀಡಿದ್ದ ದೂರಿನ ಅನ್ವಯ ಸಿದ್ದಾಪುರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಆರೋಪಿ ಬಂಧನದಿಂದ ಕೆ. ಆರ್. ಪುರಂ, ವಿಲ್ಸನ್ ಗಾರ್ಡನ್, ಅಶೋಕನಗರ ಠಾಣೆಗಳಲ್ಲಿ ದಾಖಲಾಗಿದ್ದ ಪ್ರಕರಣಗಳು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.


Share It

You cannot copy content of this page