ಸುದ್ದಿ

ದಾವಣಗೆರೆ ಜಿಲ್ಲೆಯಲ್ಲಿ ನಿಗೂಢ ಸದ್ದು: ಭಯಬೀತರಾದ ಗ್ರಾಮಸ್ಥರು

Share It

ದಾವಣಗೆರೆ: ಜಿಲ್ಲೆಯ ಗಡಿ ಗ್ರಾಮಗಳಲ್ಲಿ ನಿಗೂಢ ಶಬ್ಧವೊಂದು ಕೇಳಿಬಂದಿದ್ದರಿಂದ ಮೂರ್ನಾಲ್ಕು ಊರುಗಳ ಜನರು ಭಯಭೀತರಾದ ಘಟನೆ ಜಗಳೂರು ತಾಲೂಕಿನ ಬಾಲರಾಮಪುರ, ಹಾಗೂ ಚಿತ್ರದುರ್ಗ ಜಿಲ್ಲೆಯ ಮೊಣಕಾಲ್ಮೂರು ತಾಲೂಕಿನ ಕೋಲಮ್ಮನಹಳ್ಳಿ ಕಲ್ಲಹಳ್ಳಿ ಸೇರಿ ಕೆಲ ಗ್ರಾಮಗಳಲ್ಲಿ ಶನಿವಾರ ನಡೆದಿದೆ.

ಈ ಘಟನೆ ಶನಿವಾರ ರಾತ್ರಿ ಸುಮಾರು 8 ಗಂಟೆಗೆ ನಡೆದಿದ್ದು, ಇಡೀ ಗ್ರಾಮಗಳಲ್ಲಿ ಬಾಂಬ್ ಸ್ಫೋಟದ ರೀತಿ ನಿಗೂಢ ಶಬ್ಧ ಜನರಿಗೆ ಕೇಳಿಸಿದೆ. ಈ ರೀತಿಯ ನಿಗೂಢ ಶಬ್ಧಕ್ಕೆ ಕೆಲ ಮನೆಗಳಲ್ಲಿರುವ ಪಾತ್ರೆ ಸೇರಿ ಇನ್ನಿತರ ವಸ್ತುಗಳು ನೆಲಕ್ಕೆ ಬಿದ್ದಿವೆ‌. ಅಷ್ಟು ಭಯಾನಕ ಶಬ್ಧದಿಂದ ಮೂರ್ನಾಲ್ಕು ಗ್ರಾಮಗಳ ಗ್ರಾಮಸ್ಥರು ಭಯಭೀತರಾಗಿ ಮನೆಯಿಂದ ಹೊರಬಂದಿದ್ದರು. ಅಲ್ಲದೆ, ಈ ಘಟನೆಗೆ ನಿಖರ ಕಾರಣ ಗೊತ್ತಾಗದೆ ಗರಬಡಿದವರಂತೆ ಪರಸ್ಪರ ಚರ್ಚೆಯಲ್ಲಿ ತೊಡಗಿದ್ದರು.

ಯಾವ ಕಾರಣಕ್ಕೆ ಈ ವಿಚಿತ್ರ ಶಬ್ಧ ಕೇಳಿಬಂದಿದೆ ಎನ್ನುವುದು ಗೊಂದಲಕ್ಕೆ ಎಡೆಮಾಡಿಕೊಟ್ಟಿದೆ. ಘಟನಾ ಸ್ಥಳಕ್ಕೆ ಜಗಳೂರು ಠಾಣೆ ಪೊಲೀಸರು ಹಾಗೂ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ‌ನಡೆಸಿದರು.


Share It

You cannot copy content of this page