ಪಾಕ್ಸ್ ಕಾನ್ ಸಿಎಂ ಟ್ವೀಟ್ ಗೆ ಮಾಜಿ ಸಿಎಂ ಬೊಮ್ಮಾಯಿ ತಿರುಗೇಟು
ಆಡಳಿತ ವಿಫಲವಾದಾಗ ಬೇರೆಯವರ ಕೆಲಸವನ್ನೇ ಹೇಳಿಕೊಳ್ಳುವುದು ಸುಲಭ: ಬಸವರಾಜ ಬೊಮ್ಮಾಯಿ
ಬೆಂಗಳೂರು: ತಾವು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ 2923 ರ ಮಾರ್ಚ್ ರಂದು ಪಾಕ್ಸ್ ಕಾನ್ ಚೇರಮನ್ ಯಂಗ್ ಲೀಯು ಅವರೊಂದಿಗೆ ಸುದೀರ್ಘ ಚರ್ಚೆಯ ನಂತರ ಎಂಒಯು ಸಹಿ ಹಾಕಲಾಗಿತ್ತು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಪಾಕ್ಸ್ ಕಾನ್ ನಲ್ಲಿ ಉದ್ಯೋಗ ಸೃಷ್ಠಿಯಾಗಿರುವ ಕುರಿತು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರ ಎಕ್ಸ್ ಹೇಳಿಕೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಎಕ್ಸ್ ಮೂಲಕ ನೀಡಿರುವ ಪ್ರತಿಕ್ರಿಯೆಗೆ ತಿರುಗೇಟು ನೀಡಿರುವ ಅವರು, ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ದೊಡ್ಡ ಪ್ರಮಾಣದ ಬಂಡವಾಳ ಹೂಡಿಕೆಗೆ ಸುಮಾರು 300 ಎಕರೆ ಜಮೀನು ಮಂಜೂರು ಮಾಡಿದ್ದು ಸುಮಾರು ಒಂದು ಲಕ್ಷ ಉದ್ಯೋಗ ನಿರೀಕ್ಷೆ ಮಾಡಲಾಗಿದೆ.
ಟ್ವೀಟ್ ಮೂಲಕ ವಾಸ್ತವಾಂಶ ಬದಲಾಯಿಸಲಾಗದು. ಡಬಲ್ ಇಂಜಿನ್ ಸರ್ಕಾರ ಕೆಲಸ ಮಾಡಿದೆ. ಕಳ್ಳತನ ಎಂದು ಕರೆಯುವ ಮೂಲಕ ದಾಖಲೆಯನ್ನು ಅಳಿಸಲಾಗದು. ಅದು ಕೇವಲ ಗೊಂದಲ ಸೃಷ್ಟಿ ಮಾಡುತ್ತದೆ ಎಂದು ತಿರುಗೇಟು ನೀಡಿದ್ದಾರೆ.


