ಅಪರಾಧ ಸುದ್ದಿ

ಬೆಂಗಳೂರಲ್ಲಿ ಮತ್ತೇ ನೇಪಾಳಿಗರ ಪುಂಡಾಟ: ಪರಸ್ಪರ ಬಡಿದಾಡಿಕೊಂಡ ಯುವಕರು

Share It

ಬೆಂಗಳೂರು: ನೇಪಾಳಿಗರ ಪುಂಡಾಟ ರಾಜಧಾನಿಯಲ್ಲಿ ಮುಂದುವರಿದಿದ್ದು, ಕ್ಷುಲ್ಲಕ ಕಾರಣಕ್ಕೆ ಪರಸ್ಪರ ಬಡಿದಾಡಿಕೊಂಡಿರುವ ಘಟನೆ ಸುಬ್ರಹ್ಮಣ್ಯ ಪುರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ.

ವಸಂತನಗರದ ಹನುಮಾನ್ ಗಿರಿಯಲ್ಲಿ ಸೇರಿದ್ದ ನೂರಾರು ನೇಪಾಳಿ ಯುವಕರು ಕ್ಷುಲ್ಲಕ ಕಾರಣಕ್ಕೆ ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಇದರಿಂದ ಸ್ಥಳದಲ್ಲೇ ಇದ್ದ ಸಾರ್ವಜನಿಕರಿಗೆ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಾರ್ವಜನಿಕ ಸ್ಥಳದಲ್ಲಿ ಸೃಷ್ಟಿಯಾದ ಆತಂಕದ ವಾತಾವರಣದ ವಿರುದ್ಧ ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Share It

You cannot copy content of this page