ಕಾನ್ಪುರ್ : ಕಾನ್ಪೂರ್‌ನ ಗ್ರೀನ್ ಪಾರ್ಕ್ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ತಡವಾಗಿ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ಟೀಮ್ ಇಂಡಿಯಾ ಮಳೆರಾಯನ ಅಡ್ಡಿಯಿಂದ ಕೇವಲ 35 ಓವರ್ ಗಳಲ್ಲಿಯೇ ಮೊದಲ ದಿನದ ಆಟವನ್ನು ಮುಗಿಸಬೇಕಾಗಿ ಬಂತು.
ಬಾಂಗ್ಲಾದೇಶದ ಪರ ಆರಂಭಿಕ ಆಟಗಾರರಾಗಿ ಜಾಕಿರ್ ಹಾಸನ್ ಮತ್ತು ಶದ್ಮಾನ್ ಇಸ್ಲಾಂ ಕಣಕ್ಕಿಳಿದರು. ಬಳಿಕ ಜಾಕಿರ್ ಹಾಸನ್ 24 ಬಾಲ್ ಗಳನ್ನು ಆಡಿ ಯಾವುದೇ ಮೊತ್ತ ಗಳಿಸದೆ ಆಕಾಶ್ ದೀಪ್ ಓವರ್ ನಲ್ಲಿ ಡಕ್ ಔಟ್ ಆಗಿ ಹೊರ ನಡೆದರು. ಶದ್ಮಾನ್ ಇಸ್ಲಾಂ 36 ಬಾಲ್ ಗಳಲ್ಲಿ ನಾಲ್ಕು ಬೌಂಡರಿ ಸಹಿತ 24 ರನ್ ಬಾರಿಸಿ ಆಕಾಶದೀಪ್ ಗೆ ಎಲ್ ಬಿ ಡಬ್ಲ್ಯೂ ಮೂಲಕ ವಿಕೆಟ್ ಒಪ್ಪಿಸಿದರು.
ಬಳಿಕ ಕಣಕ್ಕಿಳಿದ್ದ ನಾಯಕ ಶಾಂಟೋ 57 ಬಾಲ್ ಗಳಲ್ಲಿ ಆರು ಬೌಂಡರಿ ಸಹಿತ 31 ರಂದು ಬಾರಿಸಿ ಅಶ್ವಿನ್ ಗೆ ವಿಕೆಟ್ ಒಪ್ಪಿಸಿ ಫೆವಿಲಿಯನ್ ಕಡೆ ಮುಖ ಮಾಡಿದರು. ಬಳಿಕ ಬಂದ ಮಾಮಿನುಲ್ ಮತ್ತು ಮುಸ್ತಾಫಿಸೂರ್ ರಹೀಮ್ ಬಾಂಗ್ಲಾದೇಶವನ್ನು ನೂರರ ಗಡಿ ದಾಟಿಸಲು ಸಫಲರಾದರು.
ನಂತರ ಬಾಂಗ್ಲಾದೇಶ ಮಳೆಯ ಅಡ್ಡಿಯಿಂದ ಆಡಿದ 35 ಓವರ್ ಗಳಲ್ಲಿ 3 ವಿಕೆಟ್ ಕಳೆದುಕೊಂಡು ಮೊದಲ ದಿನದಲ್ಲಿ 107 ರನ್ ಗಳಿಸಿದರು. ಇನ್ನು ಟೀಮ್ ಇಂಡಿಯಾದ ಪರ ಬೌಲಿಂಗ್ ಮಾಡಿದ ಆಕಾಶ್ ದೀಪ್ ಬಾಂಗ್ಲಾ ಆರಂಭಿಕ ಇಬ್ಬರು ಆಟಗಾರರ ವಿಕೆಟ್ ಕೀಳುವ ಮೂಲಕ ಆಘಾತ ನೀಡಿದರು. ಇನ್ನು ರವಿಚಂದ್ರನ್ ಅಶ್ವಿನ್ 9 ಓವರ್ ಗಳಲ್ಲಿ ಒಂದು ವಿಕೆಟ್ ಪಡೆದು ಮಿಂಚಿದರು.
ಶಿವರಾಜು ವೈ. ಪಿ
ಎಲೆರಾಂಪುರ