ಸುದ್ದಿ

ಚನ್ನರಾಯಪಟ್ಟಣ: ಮುಸ್ಲಿಂ ಬಾಂಧವರಿಂದ ರಂಜಾನ್ ಸಾಮೂಹಿಕ ಪ್ರಾರ್ಥನೆ

Share It

ಚನ್ನರಾಯಪಟ್ಟಣ: ತಾಲೂಕಿನ ಹೊಳೆನರಸೀಪುರ ವಿಧಾನಸಭಾ ಕ್ಷೇತ್ರದ ಬರಗೂರು ಹ್ಯಾಂಡ್ ಪೋಸ್ಟ್ ನಲ್ಲಿ ರಂಜಾನ್ ಹಬ್ಬದ ಪ್ರಯುಕ್ತವಾಗಿ ನಾಡಿನ ಸಮಸ್ತ ಜನತೆಯ ಒಳಿತಿಗಾಗಿ ಹಾಗೂ ಈ ರಾಜ್ಯದಲ್ಲಿ ಉತ್ತಮ ಮಳೆ ಬೆಳೆಯಾಗಲೆಂದು ಸಮಸ್ತ ಮುಸ್ಲಿಂ ಬಾಂಧವರಿಂದ ಅರಸೀಕೆರೆ ರಸ್ತೆಯಲ್ಲಿರುವ ಈದ್ಗಾ ಮೈದಾನದಲ್ಲಿ ಸಾಮೂಹಿಕವಾಗಿ ವಿಶೇಷ ಪ್ರಾರ್ಥನೆ ಮಾಡಲಾಯಿತು.

ಅನಂತರ ಎಲ್ಲರಿಗೂ ಸಿಹಿ ತಿಂಡಿ ಹಾಗೂ ತಂಪು ಪಾನೀಯಗಳನ್ನು ವಿತರಣೆ ಮಾಡಲಾಯಿತು. ಇದೇ ಸಂದರ್ಭದಲ್ಲಿ ಡಾ.ಶೇಕ್ ಉಮ್ಮರ್,ಮಸೀದಿ ಅಧ್ಯಕ್ಷರಾದ ಆಸಿಫ್ ಏಕ್ಬಾಲ್ ಬಿ.ಜೆ ಶೇಕ್ ಇರ್ಫಾನ್,ಅಯೂಬ್ ಕಲೀಮ್ ಪಾಷಾ, ಅಬ್ದುಲ್ ಫಾರೂಕ್, ಗಪಾರ್ ಅಹಮದ್, ಜುಲ್ಕರ್, ನಯನ್,ಅಹಮದ್ ಪಾಷಾ, ಸುಹಿಲ್ ಪಾಷಾ, ಕರೀಂ ಪಾಷಾ, ಇಲಿಯಾಸ್ ಪಾಷಾ, ಯಾಸೀನ್ ರವರು ಇತರರು ಹಾಜರಿದ್ದರು.


Share It

You cannot copy content of this page