ಸುದ್ದಿ

ಮಹಿಳೆಯರಿಗೆ ಸ್ಮಾರ್ಟ್ ಫೋನ್ ಬಳಕೆ ನಿಷೇಧ:ರಾಜಸ್ಥಾನದಲ್ಲಿ ಪಂಚಾಯತಿ ತೀರ್ಮಾನ !

Share It

ಜೋಧ್ ಪುರ: ಕ್ಯಾಮೆರಾ ಇರುವ ಸ್ಮಾರ್ಟ್ ಫೋಮ್ ಬಳಕೆಯನ್ನು ಹದಿಹರೆಯದ ಹೆಚ್ಚುಮಕ್ಕಳು ಮತ್ತು ಸೊಸೆಯಂದಿರು ಮಾಡುವಂತಿಲ್ಲ ಎಂಬುದೊಂದು ತೀರ್ಮಾನವನ್ನು ರಾಜಸ್ಥಾನದ ಪಂಚಾಯತಿಯಲ್ಲಿ ತೆಗೆದುಕೊಳ್ಳಲಾಗಿದೆ.

ಜೋಲಾರ್ ಜಿಲ್ಲೆಯ ಘಾಜಿಪುರ್ ಗ್ರಾಮದ  ಚೌಧರಿ ಕಮ್ಯುನಿಟಿ ಆಫ್ ಸುಧಾಮತ ಪಟ್ಟಿ ಸಮುದಾಯದ ಅಧ್ಯಕ್ಷ ಸುಜ್ನಾರಾಮ್ ನೇತೃತ್ವದಲ್ಲಿ ಸಭೆ ನಡೆಸಿ, ಇಂತಹದ್ದೊಂದು ತೀರ್ಮಾನ ಕೈಗೊಳ್ಳಲಾಗಿದೆ. ಇದು ಮಹಿಳೆಯರು ಮತ್ತು ಹೆಣ್ಣು ಮಕ್ಕಳಿಗೆ ಮೊಬೈಲ್ ಗೀಳು ಬಿಡಿಸಲು ತೆಗೆದುಕೊಂಡಿರುವ ತೀರ್ಮಾನ ಎಂದು ಪಂಚಾಯತಿ ಹೇಳಿಕೊಂಡಿದೆ.

15 ಹಳ್ಳಿಗಳಿಗೆ ಈ ತೀರ್ಮಾನ ಅನ್ವಯವಾಗಲಿದ್ದು, ಇಲ್ಲಿನ ಹೊಸದಾಗಿ ಮದುವೆಯಾಗಿ ಬಂದ ಸೊಸೆಯಂದಿರು, ಶಾಲೆಗೆ ಹೋಗುವ ಹೆಣ್ಣುಮಕ್ಕಳು, ಹದಿಹರೆಯದ ಹೆಣ್ಣುಮಕ್ಕಳು ಕ್ಯಾಮೆರಾ ಇರುವ ಸ್ಮಾರ್ಟ್ ಫೋನ್ ಬಳಕೆ ಮಾಡುವಂತಿಲ್ಲ. ಶಾಲೆ, ಕಾಲೇಜುಗಳಗೆ ಹೋಗುವ ಹೆಣ್ಣುಮಕ್ಕಳು ಪಾಠ, ಪ್ರವಚನಕ್ಕೆ ಅಗತ್ಯವಿದ್ದರೆ, ಮನೆಯಲ್ಲಿ ಮಾತ್ರ ಬಳಸಬಹುದು. ಆದರೆ, ಮದುವೆ, ಸಾರ್ವಜನಿಕ ಕಾರ್ಯಕ್ರಮಗಳು ಹಾಗೂ ಪಕ್ಕದ ಮನೆಗೆ ಹೋಗುವಾಗ ಇದನ್ನೆಲ್ಲ ನಿಷೇಧಿಸಲಾಗಿದೆ.

ಈ ಆದೇಶವನ್ನು ಜ.26 ರಿಂದ ಕಟ್ಟುನಿಟ್ಟಾಗಿ ಜಾರಿಗೆ ತರಬೇಕು ಎಂದು ಪಂಚಾಯತಿ ಆದೇಶ ಮಾಡಿದೆ. ಇದು ನಮ್ಮ ಹೆಣ್ಣುಮಕ್ಕಳನ್ನು ಮೊಬೈಲ್ ಗೀಳಿನಿಂದ ಕಾಪಾಡಲು ನಾವು ತೆಗೆದುಕೊಂಡಿರುವ ಮಹತ್ವದ ತೀರ್ಮಾನ ಎಂದು ಸಮುದಾಯದ ಅಧ್ಯಕ್ಷ ಸುಜನಾರಾಮ್ ಹೇಳಿಕೊಂಡಿದ್ದಾರೆ.


Share It

You cannot copy content of this page