ಬೆಂಗಳೂರು: ಚಿಕ್ಕಮಗಳೂರು ವಿಭಾಗದ ಚಿಕ್ಕಮಗಳೂರು ಘಟಕದಲ್ಲಿ ETM ಬ್ಲಾಸ್ಟ್ ಆಗಿದೆ ಎಂದು ಸುದ್ದಿ ಪ್ರಸಾರವಾಗಿದ್ದು, ಮೆಷಿನ್ ಬ್ಲಾಸ್ಟ್ ಆಗಿರುವುದಲ್ಲ ಎಂದು KSRTCಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ನಿರ್ವಾಹಕರು ETM ಅನ್ನು ತುಂಬಾ ಬಿಸಿಯಾಗಿದ್ದ ಬಸ್ಸಿನ ಬಾನೆಟ್ ಮೇಲೆ ತುಂಬಾ ಸಮಯ ಇಟ್ಟಿದ್ದರಿಂದ ಬಾನೆಟ್ ಶಾಖಕ್ಕೆ ಅದು ಕರಗಿದೆ ( Melted) ಎಂಬುದನ್ನು ಸ್ಪಷ್ಟಪಡಿಸಲಾಗಿದೆ. ಬಸ್ಸಿನ ಚಾಲಕರು ಚಾಲಕ-ಕಂ-ನಿರ್ವಾಹಕರಾಗಿದ್ದು, ಬಸ್ಸು ಚಿಕ್ಕಮಗಳೂರು- ಶೃಂಗೇರಿ-ಬೆಂಗಳೂರು- ಚಿಕ್ಕಮಗಳೂರು ಮಾರ್ಗದಲ್ಲಿ ಕಾರ್ಯಾಚರಣೆ ನಡೆಸುತ್ತದೆ.
ಚಾಲಕ-ಕಂ- ನಿರ್ವಾಹಕ ಟಿಕೆಟ್ ವಿತರಣೆ ನಂತರ ಮೆಷಿನ್ ಅನ್ನು ಬಸ್ಸಿನ ಬಾನೆಟ್ ಮೇಲೆ ಇಟ್ಟಿದ್ದಾರೆ, ಮೆಷೀನ್ ಗೆ ಪ್ಲಾಸ್ಟಿಕ್ ಪೌಚ್ ಹಾಕಿದ್ದರಿಂದ ಅದು ಬಾನೆಟ್ ನ ಶಾಖ ತಡೆದುಕೊಳ್ಳದೆ ಕರಗಿ ಬಾನೆಟ್ ಗೆ ಅಂಟಿಕೊಂಡಿದೆ ಇದರಿಂದ ಮೆಷಿನ್ಗೆ ಶಾಖ ತಾಗಿ ಅದು ಕರಗಲು ಪ್ರಾರಂಭಿಸಿದೆ ಎಂದು ಹೇಳಲಾಗಿದೆ.
ಕರಕಲಿನ ವಾಸನೆ ಬಂದ ನಂತರ ಅವರು ನೋಡಿಕೊಂಡಿರುತ್ತಾರೆ. ಯಾವುದೇ ಬ್ಲಾಸ್ಟ್ ಆಗಿಲ್ಲ. ಈ ಬಗ್ಗೆ ನಿರ್ವಾಹಕರಿಗೆ ಬಿಸಿಯಾದ ಬಾನೆಟ್ ಮೇಲೆ ಮೆಷಿನ್ ಅನ್ನು ಇಡದಂತೆ ತಿಳುವಳಿಕೆ ನೀಡಲಾಗಿದೆ ಎಂದು KSRTC ಪ್ರಕರಣೆಯಲ್ಲಿ ತಿಳಿಸಿದೆ.