ರಾಜಕೀಯ ಸುದ್ದಿ

ಎರಡು ದಿನದಿಂದ ಡಿಸಿಎಂ ಡಿಕೆಶಿ ಅವರ ಅಧಿಕೃತ ಕಾರ್ಯಕ್ರಮಗಳೇ ಇಲ್ಲ !

Share It

ಬೆಂಗಳೂರು: ರಾಜ್ಯದಲ್ಲಿ ರಾಜಕೀಯ ಬೆಳವಣಿಗೆಗಳು ಗರಿಗೆದರಿದ ಬೆನ್ನಲ್ಲೇ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ತಮ್ಮ ಅಧಿಕೃತ ಕಾರ್ಯಕ್ರಮಗಳನ್ನೆಲ್ಲ ಬದಿಗೊತ್ತಿದ್ದಾರೆ.

ಕಳೆದ ಎರಡು ದಿನದಿಂದ ಡಿಸಿಎಂ ಅಧಿಕೃತ ಕಾರ್ಯಕ್ರಮಗಳ ಪಟ್ಟಿಯನ್ನು ಕಾಯ್ದಿರಿಸಲಾಗಿದೆ ಎಂದಷ್ಟೇ ಕೊಡಲಾಗುತ್ತಿದೆ. ಸಿಎಂ ಭಾಗವಹಿಸಿದ ಯಾವುದೇ ಸರಕಾರಿ ಕಾರ್ಯಕ್ರಮದಲ್ಲೂ ಡಿಕೆಶಿ ಭಾಗವಹಿಸಿಲ್ಲ. ಹೀಗಾಗಿ, ಇದೊಂದು ಗೇಮ್ ಪ್ಲಾನ್ ಎನ್ನಬಹುದು.

ಈಗಾಗಲೇ ಡಿಕೆಶಿ ಬೆಂಬಲಿಗ ಶಾಸಕರು ದೆಹಲಿ ಯಾತ್ರೆ ಕೈಗೊಂಡಿದ್ದಾರೆ. ಅವರಿಗೆ ಸಲಹೆ ಸೂಚನೆ ನೀಡುವುದು ಮತ್ತು ತಂತ್ರಗಾರಿಕೆ ಹೆಣೆಯಲು ಡಿಕೆಶಿ ಅಜ್ಞಾತ ಸ್ಥಳದಲ್ಲಿ ಕುಳಿತು ಯೋಜನೆ ರೂಪಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.


Share It

You cannot copy content of this page