ಭಾರತ ಹಿಂದೂ ರಾಷ್ಟ್ರ, ಇದಕ್ಕೆ ಸಂವಿಧಾನದ ಅನುಮೋದನೆ ಬೇಕಿಲ್ಲ ಎಂದ RSS ಮುಖ್ಯಸ್ಥ ಮೋಹನ್ ಭಾಗವತ್
ನವದೆಹಲಿ: ಭಾರತ ಹಿಂದೂ ರಾಷ್ಟ್ರ ಎಂದು ಹೇಳಲು ಸಂವಿಧಾನದ ಅನುಮೋದನೆ ಬೇಕಿಲ್ಲ ಎನ್ನುವ ಮೂಲಕ RSS ಮುಖ್ಯಸ್ಥ ಮೋಹನ್ ಭಾಗವತ್, ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಸೂರ್ಯ ಪೂರ್ವದಲ್ಲಿ ಉದಯಿಸುತ್ತಾನೆ ಎಂಬುದಕ್ಕೆ ಸಂವಿಧಾನಾತ್ಮಕ ಅನುಮೋದನೆ ಪಡೆಯಲಾಗುತ್ತದೆಯೇ ಹಾಗೆಯೇ, ನಮ್ಮ ಪೂರ್ವಜರಂತೆ ಹಿಂದೂ ಸಂಸ್ಕ್ರತಿ ಪಾಲನೆ ಮಾಡಿಕೊಂಡು ಬಂದಿರುವ ನಮಗೆ ಭಾರತ ಹಿಂದೂ ರಾಷ್ಟ್ರವೇ ಸರಿ. ಇದಕ್ಕೆ ಸಂವಿಧಾನದ ಅನುಮೋದನೆ ಬೇಕಿಲ್ಲ ಎಂದಿದ್ದಾರೆ.
ಆ ಮೂಲಕ ತಮ್ಮ ಸಂವಿಧಾನ ವಿರೋಧಿ ಮನಸ್ಥಿತಿಯನ್ನು ಮತ್ತೊಮ್ಮೆ ಜಗಜ್ಜಾಹೀರು ಮಾಡಿದ್ದಾರೆ. RSS ಮುಸ್ಲಿಂ ವಿರೋಧಿ ಮನಸ್ಥಿತಿ ಹೊಂದಿಲ್ಲ, ಯಾವುದೇ ಧರ್ಮ ಪಾಲನೆ ಮಾಡಿದರೂ, ಭಾರತವನ್ನು ಹಿಂದೂ ರಾಷ್ಟ್ರ ಎಂದಿ ಒಪ್ಪಿಕೊಳ್ಳಬೇಕಷ್ಟೇ ಎಂದಿದ್ದಾರೆ. ಇದೀಗ ಈ ಹೇಳಿಕೆ ಭಾರಿ ಟೀಕೆಗೆ ಗುರಿಯಾಗಿದೆ.
ಇದು RSS ಹಾಗೂ ಬಿಜೆಪಿ ನಾಯಕರ ಮನಸ್ಥಿತಿ. ಸಂವಿಧಾನದ ಮಹತ್ವವನ್ನು ಈ ಮೂಲಕ ಕಡಿಮೆ ಮಾಡುವ ಪ್ರಯತ್ನವನ್ನು ಭಾಗವತ್ ಮಾಡಿದ್ದಾರೆ. ಇದೊಂದು ದುರದೃಷ್ಟಕರ ಹೇಳಿಕೆ. RSS ಎಂದಿಗೂ ಸಂವಿಧಾನ ವಿರೋಧಿ ಎಂಬುದನ್ನು ಇದು ಖಚಿತಪಡಿಸಿದೆ ಎಂದು ಕಾಂಗ್ರೆಸ್ ನಾಯಕರು ಕಿಡಿಕಾರಿದ್ದಾರೆ.


