ಉಪಯುಕ್ತ ಸುದ್ದಿ

ಲಗೇಜ್ ದರ ಏರಿಕೆ ಮಾಡಿದ KSRTC : ನಾಳೆಯಿಂದಲೇ ಪರಿಷ್ಕೃತ ದರಗಳು ಜಾರಿ

Share It

ಬೆಂಗಳೂರು: ಸಾರಿಗೆ ಬಸ್ಸುಗಳಲ್ಲಿನ ಲಗೇಜ್ ಸಾಗಿಸುವುದಕ್ಕೆ ವಿಧಿಸುವ ದರಗಳನ್ನು ಪರಿಷ್ಕರಣೆ ಮಾಡಿರುವ KSRTC, ನಾಳೆಯಿಂದಲೇ ಜಾರಿಗೆ ತಂದಿದೆ.

ಡೀಸೆಲ್ ಬೆಲೆ, ಸಿಬ್ಬಂದಿ ನಿರ್ವಹಣೆ ಹಾಗೂ ಇನ್ನಿತರ ವೆಚ್ಚಗಳು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಲಗೇಜ್ ದರ ಹೆಚ್ಚಳ ಮಾಡುತ್ತಿರುವುದಾಗಿ ಸಮಜಾಯಿಷಿ ನೀಡಿರುವ KSRTC, ಫೆ.16 ರಿಂದಲೇ ದರ ಹೆಚ್ಚಳವನ್ನು ಜಾರಿಗೆ ತರುವಂತೆ BMTC, KKSRTC, NWSRTC ಸಂಸ್ಥೆಗಳಿಗೆ ಸೂಚನೆ ನೀಡಿದೆ.

ನೂತನ ಪರಿಷ್ಕೃತ ದರವನ್ನು ಇಟಿಎಂ ಮೆಷಿನ್ ಗಳಲ್ಲಿ ಇಂದಿನಿಂದಲೇ ಅಳವಡಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಪ್ರತಿ ಬಾರಿ ಲಗೇಜು ದರ ಏರಿಕೆ‌ ಬಸ್ ಪ್ರಯಾಣ‌ ದರ‌ ಏರಿಕೆಯೊಂದಿಗೆ ಆಗುತ್ತದೆ. ಕಳೆದ ವರ್ಷ ಜನವರಿ 2025 ರಂದು ಬಸ್ ಪ್ರಯಾಣ ದರ ಏರಿಕೆ‌ಯಾಗಿತ್ತು, ಆದರೆ, ಲಗೇಜು ದರ‌ ಏರಿಕೆ‌ ಮಾಡಿರಲಿಲ್ಲ. ಆ ಸಂಬಂದ ನಾಳೆಯಿಂದ ಜಾರಿಗೆ ಬರುವಂತೆ ಲಗೇಜು ದರ ಏರಿಕೆಯಾಗಿದೆ‌ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

30 kg ವರೆಗೂ ಉಚಿತ, ನಂತರ ದರ ಅನ್ವಯಿಸುತ್ತದೆ. ಈ‌ ಹಿಂದೆ ಲಗೇಜು ದರ ಡಿಸೆಂಬರ್ 2021 ರಲ್ಲಿ ಏರಿಕೆಯಾಗಿತ್ತು. ಅಲ್ಲಿಂದ ಈವರೆಗೆ ಲಗೇಜು ದರವನ್ನು ಏರಿಕೆ ಮಾಡಿರಲಿಲ್ಲ. ಇದೀಗ ನಾಳೆಯಿಂದ ಏರಿಕೆಯಾಗಲಿದೆ.


Share It

You cannot copy content of this page