ಹೊಳಲ್ಕೆರೆ : ಮನೆ ಬೀಗ ಮುರಿದು ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಮತ್ತು ನಗದು ಕದ್ದೊಯ್ದ ಕೃತ್ಯ ತಾಲ್ಲೂಕಿನ ಆಡನೂರು ಗ್ರಾಮದಲ್ಲಿ ನಡೆದಿದೆ.
ಆಡನೂರು ಗ್ರಾಮದ ರೇಖಾ ಎಂಬುವರ ಮನೆಯಲ್ಲಿ ಈ ಕಳ್ಳತನ ನಡೆದಿದೆ. ನಿನ್ನೆ ಮಂಗಳವಾರ ರಾತ್ರಿ ಈ ಕಳ್ಳತನ ನಡೆದಿದೆ. ಮನೆ ಮಾಲೀಕರಾದ ರೇಖಾ ಕುಟುಂಬದವರು ಧರ್ಮಸ್ಥಳಕ್ಕೆ ಹೋಗಿದ್ದಾಗ ಕಳೆದ ಮಂಗಳವಾರ ಮಧ್ಯರಾತ್ರಿ ಹೊಂಚು ಹಾಕಿ ಬಂದಿದ್ದ ಕಳ್ಳರು ಮನೆ ಬೀಗ ಮುರಿದು ಒಳಗೆ ನುಗ್ಗಿದ್ದಾರೆ. ನಂತರ ಮನೆಯೊಳಗಿನ ಬೀರುವಿನಲ್ಲಿದ್ದ 174 ಗ್ರಾಂ ಚಿನ್ನಾಭರಣ ಮತ್ತು 64 ಸಾವಿರ ರೂಪಾಯಿ ನಗದು ದೋಚಿಕೊಂಡು ಪರಾರಿಯಾಗಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕೆ ಬಂದ ಚಿಕ್ಕಜಾಜೂರು ಠಾಣೆ ಪೊಲೀಸರು ಮತ್ತು ಬೆರಳಚ್ಚು ತಜ್ಞರ ತಂಡ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.