ಚಿಕ್ಕಬಳ್ಳಾಪುರ: ಒಡಹುಟ್ಟಿದ ತಂಗಿಯ ಮೇಲಿನ ದ್ವೇಷಕ್ಕೆ ಆಕೆಯ ಮಕ್ಕಳನ್ನು ಅಕ್ಕನೇ ಕಿಡ್ನ್ಯಾಪ್ ಮಾಡಿ ಮಗನನ್ನೇ ಕೊಂದು ಹಾಕಿರುವ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.
ಅಂಬಿಕಾ ಎಂಬಾಕೆ 9 ವರ್ಷದ ಬಾಲಕನನ್ನು ಕೊಲೆ ಮಾಡಿರುವುದು ಪೊಲೀಸರ ವಿಚಾರಣೆ ವೇಳೆ ಬಯಲಾಗಿದೆ.
2023 ರಲ್ಲಿ ನಡೆದಿದ್ದ ಕೊಲೆ ಇದಾಗಿದ್ದು, ಇದೀಗ ಪ್ರಕರಣ ಬಯಲಿಗೆ ಬಂದಿದೆ. 9 ವರ್ಷದ ಬಾಲಕ ಮಧು ಕೊಲೆಯಾದ ದುರ್ದೈವಿ. ತನ್ನ ಇಬ್ಬರು ಮಕ್ಕಳನ್ನು ಅಕ್ಕ ಅಂಬಿಕಾ ಕಿಡ್ನ್ಯಾಪ್ ಮಾಡಿದ್ದಳು ಎಂದು ತಂಗಿ ದೂರು ನೀಡಿದ್ದರು.
9 ವರ್ಷದ ಮಧು ಮತ್ತು ಮನುಶ್ರೀ (8) ಕಿಡ್ನಾಪ್ ಆಗಿದ್ದ ಮಕ್ಕಳು. ಇಬ್ಬರಲ್ಲಿ ಕಿರಿಯನಾದ ಮಧುವನ್ನು ದೊಡ್ಡಮ್ಮ ಅಂಬಿಕಾ ಗುದ್ದಲಿಯಿಂದ ಹೊಡೆದು ಕೊಲೆ ಮಾಡಿದ್ದಳು ಎನ್ನುವ ಆರೋಪ ಕೇಳಿ ಬಂದಿದೆ.