ಬೆಂಗಳೂರು: ನಟ ದರ್ಶನ್‌ಗೆ ಬೆಂಗಳೂರು ಪೊಲೀಸರು ಮತ್ತೊಂದು ಶಾಕ್ ನೀಡಿದ್ದು, ಕೊಲೆ ಆರೋಪದಲ್ಲಿ ಜಾಮೀನು ಪಡೆದು ಹೊರಗಿರುವ ದರ್ಶನ್‌ಗೆ ಮತ್ತೊಂದು ನೊಟೀಸ್ ನೀಡಿದ್ದಾರೆ.
ನಟ ದರ್ಶನ್ ತನ್ನ ಸೇಫ್ಟಿಗಾಗಿ ಪಡೆದಿರುವ ಗನ್ ವಾಪಸ್ ಪಡೆಯಲು ಬೆಂಗಳೂರು ಪೊಲೀಸರು ತೀರ್ಮಾನಿಸಿದ್ದಾರೆ. ಈ ಸಂಬAಧ ನೊಟೀಸ್ ನೀಡಿರುವ ಪೊಲೀಸರು, ಗನ್ ಲೈಸೆನ್ಸ್ ಹಿಂಪಡೆಯದಿರಲು ಕಾರಣ ಕೇಳಿ ನೊಟೀಸ್ ನೀಡಿದ್ದಾರೆ.
ಕೊಲೆ ಆರೋಪದ ಹಿನ್ನೆಲೆಯಲ್ಲಿ ಗನ್ ಲೈಸೆನ್ಸ್ ಹಿಂಪಡೆಯಲು ಅವಕಾಶವಿದೆ. ಈ ಅವಕಾಶ ಬಳಸಿಕೊಂಡು, ಲೈಸೆನ್ಸ್ ವಾಪಸ್ ಪಡೆಯಲು ತೀರ್ಮಾನಿಸಲಾಗಿದೆ. ಹೀಗಾಗಿ, ನೊಟೀಸ್‌ಗೆ ಉತ್ತರ ನೀಡಲು ಏಳು ದಿನಗಳ ಕಾಲಾವಕಾಶ ನೀಡಿದ್ದಾರೆ.