ದಾವಣಗೆರೆ : ಸರ್ಕಾರದ ಭೂಮಿಯನ್ನು ಒತ್ತುವರಿ ಮಾಡಿಕೊಂಡವರಿಗೆ ಅರಣ್ಯ ಇಲಾಖೆ ಪಾಠ ಕಲಿಸಿದೆ. ಚನ್ನಗಿರಿಯ ಶಾಂತಿನಗರದಲ್ಲಿ ರೈತರು ಅರಣ್ಯ ಪ್ರದೇಶವನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದನ್ನು ಅರಣ್ಯ ಇಲಾಖೆ ಒತ್ತುವರಿ ಮಾಡಿಕೊಂಡಿದೆ.
ಗುಡುಂಘಟ್ಟದ ಸರ್ವೇ ನಂಬರ್ 43 ರಲ್ಲಿ ಒಟ್ಟು 15 ಎಕ್ಕರೆ ಭೂಮಿಯನ್ನು ರೈತರು ಒತ್ತುವರಿ ಮಾಡಿಕೊಂಡಿದ್ದರು. ಒತ್ತುವರಿಯ ಜಾಗದಲ್ಲಿ ಅಡಿಕೆ, ಬಾಳೆ ಇತರ ಬೆಳೆಗಳನ್ನು ಬೆಳೆದಿದ್ದರು. ಅರಣ್ಯ ಇಲಾಖೆಯು ಒಮ್ಮೆಲೇ ದಾಳಿ ಮಾಡಿ 3000 ಅಡಿಕೆ ಗಿಡಗಳು ಹಾಗೂ ಬಾಳೆ ತೋಟವನ್ನು ತೆರವು ಮಾಡಿ ಜಾಗವನ್ನು ವಶಕ್ಕೆ ಪಡೆದಿದ್ದಾರೆ.
ರೈತರು ಬಹಳ ಹಿಂದೆಯೇ ಅರಣ್ಯವನ್ನು ಒತ್ತುವರಿ ಮಾಡಿಕೊಂಡು ಉಳುಮೆ ಮಾಡುತ್ತಿದ್ದರು. ಸದ್ಯ ಭೂಮಿಯನ್ನು ಅಧಿಕಾರಿಗಳ ಸಮ್ಮುಖದಲ್ಲಿ ತೆರವು ಮಾಡಿದ್ದಾರೆ.