ಮಂಗಳೂರು : ಪಿಸ್ತಾ ಸೇವಿಸುವಾಗ ಅದರ ಸಿಪ್ಪೆ ಗಂಟಲಲಿ ಸಿಲುಕಿ 2 ವರ್ಷದ ಮಗು ಸಾವನ್ನಪ್ಪಿರುವ ಘಟನೆ ಕಾಸರಗೋಡಿನ ಕುಂಬಳೆ ಎಂಬಲ್ಲಿ ನಡೆದಿದೆ.
ಮೃತ ಮಗು ನಗರದ ಅನ್ವರ್ ಮೆಹರೂಫಾ ದಂಪತಿಯ ಪುತ್ರ ಅನಾಸ್(2).
ಏನಿದು ಘಟನೆ : ಮಗು ಮನೆಯಲ್ಲಿ ಪಿಸ್ತಾವನ್ನು ತಿನ್ನುತ್ತಿದ್ದಾಗ ಗಂಟಲಿಗೆ ಅದರ ಸಿಪ್ಪೆ ಸಿಕ್ಕಿಕೊಂಡಿದೆ. ತಕ್ಷಣ ಪೋಷಕರು ಗಂಟಲಲ್ಲಿ ಸಿಲುಕಿಕೊಂಡಿದ್ದ ಒಂದು ತುಂಡು ಸಿಪ್ಪೆಯನ್ನು ಹೊರತೆಗೆದು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ವೈದ್ಯರ ತಪಾಸಣೆ ನಂತರ ಗಂಟಲಲ್ಲಿ ಏನು ಸಿಲುಕಿಕೊಂಡಿಲ್ಲ ಎಂದು ವೈದ್ಯರು ಹೇಳಿದ್ದಾರೆ.
ಬಳಿಕ ಮನೆಗೆ ಹಿಂದಿರುಗಿದ್ದಾರೆ. ಆದರೆ ಭಾನುವಾರ ಮಗುವಿಗೆ ತೀವ್ರ ಉಸಿರಾಟದ ತೊಂದರೆಯಾಗಿದ್ದು. ಆಸ್ಪತ್ರೆಗೆ ಕರೆದುಕೊಂಡು ಹೋದರು ಮಗು ಉಳಿಯಲಿಲ್ಲ. ಮಗುವಿನ ತಂದೆ ಗಲ್ಫ್ ದೇಶದಲ್ಲಿ ಇದ್ದು ಸುದ್ದಿ ತಿಳಿದ ತಕ್ಷಣ ಊರಿಗೆ ಮರಳಿದ್ದಾರೆ.