ಹಲ್ಲುಗಳು ಅತ್ಯಂತ ಅವಶ್ಯಕವಾದ ಭಾಗವಾಗಿದೆ. ನಾವು ಸೇವಿಸುವ ಆಹಾರ ಜೀರ್ಣವಾಗಬೇಕಾದರೆ ಮೊದಲನೇ ಕೆಲಸ ಮಾಡುವುದು ಹಲ್ಲುಗಳು. ಹಲ್ಲುಗಳನ್ನು ಸ್ವಚ್ಚವಾಗಿಡಲು ವಿವಿಧ ಬಗೆಯ ಚೂರ್ಣವನ್ನು ಬಳಸುತ್ತೇವೆ. ಆದರೂ ನಿಮ್ಮ ಹಲ್ಲು ಹಳದಿಯಾಗಿದೆಯ?? ಅಥವಾ ಎಷ್ಟೇ ಪ್ರಯತ್ನ ಪಟ್ಟರೂ ಹಲ್ಲಿನ ಮೇಲೆ ಕರೆಗಳು ಇದ್ದಾರೆ ಇಲ್ಲಿದೆ ಪರಿಹಾರ !!
ಅಡಿಗೆ ಸೋಡಾ:
ಮನೆಯಲ್ಲಿ ಸಿಗುವ ಅಡುಗೆ ಸೋಡ ಮತ್ತು ನೀರನ್ನು ಮಿಶ್ರಣ ಮಾಡಿ ಪೇಸ್ಟ್ ತಯಾರಿಸಿಕೊಳ್ಳಿ. ಬಳಿಕ ನಿತ್ಯ ಬ್ರಷ್ ಮಾಡುವಂತೆ ಪೇಸ್ಟ್ ನಿಂದ ಹಲ್ಲನ್ನು ಸ್ವಚ್ಛಗೊಳಿಸಿ.
ಬಿಳಿ ವಿನೆಗರ್:
ಬಿಳಿ ವಿನೆಗರ್ ನಲ್ಲಿ ಅಸಿಟಿಕ್ ಆಮ್ಲ ಅಧಿಕವಾಗಿರುತ್ತದೆ. ಇದು ಹಲ್ಲಿನ ಮೇಲೆ ಇರುವ ಕಲೆ ಹಾಗೂ ಹಲ್ಲಿನ ಸಂದುಗಳನ್ನು ಸ್ವಚ್ಛಗೊಳಿಸುತ್ತದೆ. ಎರಡು ಚಮಚ ವಿನೆಗರ್, ಅರ್ಧ ಲೋಟ ನೀರು ಮತ್ತು ಎರಡು ಚಮಚ ಉಪ್ಪಿನ ದ್ರಾವಣವನ್ನು ಬಳಸಿ ಹಲ್ಲನ್ನು ಸ್ವಚ್ಛಗೊಳಿಸಿ.
ಕಿತ್ತಳೆ ಸಿಪ್ಪೆಯನ್ನು ಬಳಸಿ :
ಕಿತ್ತಳೆ ಸಿಪ್ಪೆಯ ಕೀಟಾಣುಗಳು ಮತ್ತು ಬ್ಯಾಕ್ಟೀರಿಯಾಗಳನ್ನು ಕೊಳ್ಳುತ್ತದೆ ಚಿಪ್ಪೆಯ ಬಿಳಿ ಭಾಗದಿಂದ ಒಂದೆರಡು ನಿಮಿಷ ಹಲ್ಲನ್ನು ಉಜ್ಜಿ.
ಎಳ್ಳು ಮತ್ತು ವಿಟಮಿನ್ ಸಿ ಭರಿತ ಆಹಾರ:
ಟೊಮ್ಯಾಟೊ ಹಾಗೂ ಇತರ ಆಹಾರಗಳನ್ನು ಸೇವಿಸುವುದರಿಂದ ಕಲೆಗಳು ಮಾಯವಾಗುತ್ತದೆ. ನಿತ್ಯ ಒಂದು ಹಿಡಿ ಎಳ್ಳನ್ನು ಸೇವಿಸಿದರೆ ಸಾಕು ಕಲೆ ಮಾಯವಾಗುತ್ತದೆ.