ಪ್ರಯಾಗ್ ರಾಜ್ : ಮಹಾ ಕುಂಭ ಮೇಳ ಆರಂಭವಾಗಿದ್ದು, ಮೇಳದ ಆವರಣದಲ್ಲಿ ಯತಿ ನರಸಿಂಹಾನಂದ ಗಿರಿಯ ಮುಂದೆ ಮುಸ್ಲಿಂ ವ್ಯಕ್ತಿಯೊಬ್ಬ ಅನುಮಾನಾಸ್ಪದವಾಗಿ ಓಡಾಡುತ್ತಿದ್ದದ್ದು ಗಮನಿಸಿದ ಪೊಲೀಸರು ವ್ಯಕ್ತಿಯನ್ನು ಬಂಧಿಸಿದ್ದಾರೆ.
ಬಂಧಿತ ವ್ಯಕ್ತಿಯ ಹೆಸರು ಆಯುಬ್ ಎಂದು ತಿಳಿದು ಬಂದಿದೆ. ಮಂಗಳವಾರ ಮಧ್ಯಾಹ್ನ 3 ಗಂಟೆಯ ಸುಮಾರಿಗೆ ಆವರಣದಲ್ಲಿ ಓಡಾಡುತ್ತಿದ್ದ. ಆಗ ಅಲ್ಲಿನ ಸ್ವಯಂ ಸೇವಕರು ಆತನನ್ನು ಪ್ರಶ್ನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಈ ಘಟನೆಯ ನಂತರ ಯತಿಗಳಿಗೆ ಹೆಚ್ಚಿನ ಭದ್ರತೆ ಒದಗಿಸಲು ಪೊಲೀಸರಿಗೆ ಉದಿತಾ ತ್ಯಾಗಿ ಮನವಿ ಮಾಡಿದ್ದಾರೆ. ಯತಿ ನರಸಿಂಹಾನಂದ ರವರು ಪ್ರವಾದಿ ಮಹಮ್ಮದ್ ಅವರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಈ ಕಾರಣಕ್ಕಾಗಿ ಅವರನ್ನು ಮಹಾದೇವ ಶಿಬಿರದಲ್ಲಿ ತಂಗಿಸಲಾಗಿದೆ.
ಬಂಧಿತ ವ್ಯಕ್ತಿಯನ್ನು ವಿಶೇಷ ಕಾರ್ಯಾಚರಣೆ ತಂಡವು ತನಿಖೆ ನಡೆಸಿದ್ದು, ವ್ಯಕ್ತಿ ಬಳಿ ಯಾವುದೇ ಅನುಮಾನಾಸ್ಪದ ವಸ್ತುಗಳು ಪತ್ತೆಯಾಗಿಲ್ಲ. ಅವರು ಮೂಲತಃ ಇಟಾಹ್ ನವರು ಎಂದು ತಿಳಿದು ಬಂದಿದೆ. ಆಹಾರಕ್ಕಾಗಿ ಹುಡುಕಾಟ ನಡೆಸುತ್ತಿದ್ದರು ಎಂದು ತಿಳಿದು ಬಂದಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.