ಉಪಯುಕ್ತ ಸುದ್ದಿ

ವಿಶ್ವದ ಟಾಪ್ ಭಾಷೆ ಯಾವುದು ಗೊತ್ತ: ಕನ್ನಡಕ್ಕೆ ಸ್ಥಾನಮಾನ ಇಲ್ಲ

Share It

ಭಾಷೆ ಮನುಷ್ಯನ ಸಂವಹನದ ಮೂಲವಾಗಿದೆ. ಮನುಷ್ಯ ತನ್ನ ಅಭಿಪ್ರಾಯ ಹಂಚಿಕೊಳ್ಳಲು ಭಾಷೆ ಬಹಳ ಮುಖ್ಯವಾದದ್ದು. ನಮ್ಮ ವಿಶ್ವದಲ್ಲಿ 8 ಶಕೋಟಿಗಿಂತ ಹೆಚ್ಚು ಜನರಿದ್ದಾರೆ. ಅವರೆಲ್ಲರೂ ತಮ್ಮ ತಮ್ಮ ಭಾಷೆಗಳನ್ನು ಮಾತನಾಡುತ್ತಾರೆ. ಆದರೆ ವಿಶ್ವದಲ್ಲಿ ಹೆಚ್ಚು ಬಳಕೆಯಾಗುವ ಭಾಷೆ ಯಾವುದು ಎಂಬುದು ನಿಮಗೆ ಗೊತ್ತ?

ಹೌದು ವಿಶ್ವದಲ್ಲಿ ಹೆಚ್ಚು ಮಾತನಾಡುವ ಟಾಪ್ 10 ಭಾಷೆಗಳು ಯಾವುವು ಎಂಬುದನ್ನು ತಿಳಿಯೋಣ ಬನ್ನಿ.

10 ನೆ ಸ್ಥಾನದಲ್ಲಿ ಇಂಡೋನೇಷಿಯಾ ಭಾಷೆಯಾಗಿದೆ. ವಿಶ್ವದಲ್ಲಿ 19.9 ಕೋಟಿ ಜನರು ಈ ಭಾಷೆಯನ್ನು ಮಾತನಾಡುತ್ತಾರೆ.

9 ನೆಯ ಸ್ಥಾನದಲ್ಲಿ ಇರುವುದು ಪೋರ್ಚುಗೀಸ್ ಭಾಷೆ. ಇದನ್ನು 23.4 ಕೋಟಿ ಜನರ ತಮ್ಮ ಸಂವಹನ ಭಾಷೆಯಾಗಿ ಬಳಕೆ ಮಾಡುತ್ತಾರೆ.

8 ನೆಯ ಸ್ಥಾನದಲ್ಲಿ ರಷ್ಯಯನ್ ಭಾಷೆ ಇದೆ. ಸುಮಾರು 25. 8 ಕೋಟಿ ಜನರು ಈ ಭಾಷೆಯನ್ನು ಬಳಸುತ್ತಾರೆ.

7 ನೆಯ ಸ್ಥಾನದಲ್ಲಿ ಬಂಗಾಳಿ ಭಾಷೆ ಇದ್ದು 26.5 ಕೋಟಿ ಜನರು ಮಾತನಾಡುತ್ತಾರೆ.

6 ನೆಯ ಸ್ಥಾನದಲ್ಲಿ ಅರೆಬಿಕ್ ಭಾಷೆಯನ್ನು ಮಾತನಾಡುವ ಇದ್ದಾರೆ. ಅದರ ಲೆಕ್ಕ 27.4 ಕೋಟಿ .

5ನೆಯ ಸ್ಥಾನದಲ್ಲಿ ಪ್ರೆಂಚ್ ಭಾಷೆ ಇದ್ದು, ವಿಶ್ವದಲ್ಲಿ 28 ಕೋಟಿ ಜನರು ಈ ಭಾಷೆಯನ್ನು ಸಂವಹನ ಭಾಷೆಯಾಗಿ ಬಳಕೆ ಮಾಡುತ್ತಾರೆ.

4 ನೆಯ ಸ್ಥಾನದಲ್ಲಿ ಸ್ಪ್ಯಾನಿಶ್ ಭಾಷೆ ಇದ್ದು  ವಿಶ್ವದಲ್ಲಿ 53.40 ಕೋಟಿ ಜನರು ಈ ಭಾಷೆಯನ್ನು ಮಾತನಾಡುತ್ತಾರೆ.

3ನೆಯ ಸ್ಥಾನದಲ್ಲಿ ಭಾರತದ ಹಿಂದಿ ಭಾಷೆ ಇದೆ. ಸುಮಾರು 61.50 ಕೋಟಿ ಜನ ಹಿಂದಿಯನ್ನು ಸಂವಹನ ಭಾಷೆಯಾಗಿ ಬಳಕೆ ಮಾಡುತ್ತಾರೆ.

2 ನೆಯ ಸ್ಥಾನದಲ್ಲಿ ಚೈನಿಸ್ ಭಾಷೆ ಇದ್ದು, 111.70 ಕೋಟಿ ಜನರು ಈ ಭಾಷೆಯನ್ನು ಬಳಸುತ್ತಾರೆ.

1 ನೆಯ ಸ್ಥಾನದಲ್ಲಿ ಇಂಗ್ಲಿಷ್ ಭಾಷೆ ಇದೆ. ವಿಶ್ವದಾದ್ಯಂತ ಸುಮಾರು 113.20 ಕೋಟಿ ಜನರು ಈ ಭಾಷೆಯನ್ನು ಮಾತನಾಡುತ್ತಾರೆ. ಈ ಭಾಷೆಯು ವಿಶ್ವದ ಭಾಷೆಯಾಗಿ ಬೆಳೆದಿದೆ.


Share It

You cannot copy content of this page