ತಿರುಪತಿ: ಡಿಸೆಂಬರ್ ನಲ್ಲಿ ನಡೆದ ಬಾರ್ಡರ್ ಗಾವಸ್ಕರ್ ಟ್ರೋಫಿಯಲ್ಲಿ ಭಾರತವು ಹೀನಾಯವಾಗಿ ಸೋಲನ್ನು ಒಪ್ಪಿಕೊಂಡಿತು. ಭಾರತದ ಅನುಭವಿ ಆಟಗಾರರು ಪದೇ ಪದೇ ಆಸೀಸ್ ಬೌಲರ್ ಗಳಿಗೆ ವಿಕೆಟ್ ಒಪ್ಪಿಸುತ್ತಿದ್ದರೆ, ಯುವ ಆಟಗಾರ ನಿತೀಶ್ ಕುಮಾರ್ ರೆಡ್ಡಿ ದೃಢವಾಗಿ ನಿಂತಿದ್ದರು.
ಸದ್ಯ ತವರಿಗೆ ಮರಳಿದ ನಂತರ ನಿತೀಶ್ ತಿರುಪತಿಗೆ ಭೇಟಿ ನೀಡಿದ್ದಾರೆ. ಕಾಲು ನಡಿಗೆಯಲ್ಲೇ ಬೆಟ್ಟವನ್ನು ಹತ್ತಿರುವ ನಿತೀಶ್ ಮೊಣಕಾಲಿನಲ್ಲಿ ಮೆಟ್ಟಿಲನ್ನು ಏರಿದ್ದಾರೆ.
ಹೌದು. ಅಂತಾರಾಷ್ಟ್ರೀಯ ಮಟ್ಟದಲ್ಲಿ ತನ್ನ ಮೊದಲ ಶತಕವನ್ನು ಭಾರಿಸಿದ ನಿತೀಶ್ 5 ಪಂದ್ಯಗಳಲ್ಲಿ ಭರ್ಜರಿ ಬ್ಯಾಟಿಂಗ್ ಮಾಡಿದರು.
177 ಎಸೆತಗಳಲ್ಲಿ 114 ರನ್ ಗಳಿಸಿ 8 ರ ಕ್ರಮಾಂಕದಲ್ಲಿ ಹೆಚ್ಚು ರನ್ ಗಳಿಸಿದ ಭಾರತೀಯ ಆಟಗಾರ ಎಂಬ ದಾಖಾಲೆಯನ್ನು ಬರೆದರು. ಈ ಮೊದಲು ಈ ದಾಖಲೆ ಅನಿಲ್ ಕುಂಬ್ಳೆ ಅವರ ಹೆಸರಿನಲ್ಲಿ ಇತ್ತು.
ನಿತೀಶ್ ಕುಮಾರ್ ರೆಡ್ಡಿ ಬಾರ್ಡರ್ ಗಾವಸ್ಕರ್ ಟ್ರೋಫಿಯಲ್ಲಿ 37.24 ಸಾರಸರಿಯಲ್ಲಿ ಬ್ಯಾಟ್ ಬೀಸಿ 298 ರನ್ ಕಲೆ ಹಾಕಿದ್ದಾರೆ. ಜೊತೆಗೆ ಬೌಲಿಂಗ್ ನಲ್ಲಿಯೂ ತನ್ನ ಕರಾಮತ್ತು ತೋರಿಸಿದ ನಿತೀಶ್ 5 ವಿಕೆಟುಗಳನ್ನು ಪಡೆದಿದ್ದಾರೆ.
ನಿತೀಶ್ ರ ಪ್ರದರ್ಶನ ಕಂಡು ಭಾರತೀಯ ಕ್ರಿಕೆಟ್ ಅಭಿಮಾನಿಗಳು ಮತ್ತೊಬ್ಬ ಸಧೃಡ ಅಲ್ ರೌಂಡರ್ ಭಾರಕ್ಕೆ ಮರಳಿದ ಎಂದು ಖುಷಿಯಾಗಿದ್ದಾರೆ.