ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲಿ ಭಾರತದ ಇತರ ಆಟಗಾರರು ಮಾಡದ ಸಾಧನೆಯನ್ನು ನಿತೀಶ್ ರೆಡ್ಡಿ ಮಾಡಿದ್ದು ಗೊತ್ತೇ ಇದೆ. ಐತಿಹಾಸಿಕ ಟೆಸ್ಟ್ ಸರಣಿಯ ಬಳಿಕ ನಿತೀಶ್ ಲಕ್ ಕೂಡ ಬದಲಾಗಿದೆ. ಭಾರತದ ಭವಿಷ್ಯ ಎಂದು ಕ್ರಿಕೆಟ್ ಅಭಿಮಾನಿಗಳು ಮಾತನಾಡಿಕೊಳ್ಳುತ್ತಿದ್ದಾರೆ.
ಹೌದು ನಿತೀಶ್ ಕುಮಾರ್ ರೆಡ್ಡಿ ಭಾರತ ಇಂಗ್ಲೆಂಡ್ ಸರಣಿಗೆ ಆಯ್ಕೆಯಾಗಿದ್ದಾರೆ. ಬಳಿಕ ಇವರ ಆಟವನ್ನು ನೋಡಿ ಚಾಂಪಿಯನ್ ಟ್ರೋಫಿಯಲ್ಲಿ ಸ್ಥಾನ ಕೊಡುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ ಎಂದು ಮೂಲಗಳು ತಿಳಿಸಿವೆ.
ನಿತೀಶ್ ಸಾಮಾನ್ಯ ಕುಟುಂಬದಿಂದ ಬಂದ ಹುಡುಗ. ನಿತೀಶ್ ಗೆ ಕ್ರಿಕೆಟ್ ಕಿಟ್ ತೆಗೆದುಕೊಳ್ಳಲು ದುಡ್ಡಿಲ್ಲದ ಪರಿಸ್ಥಿತಿ ಅನೇಕ ಬಾರಿ ಎದುರಾಗಿದೆ. ಕುಟುಂಬದ ಸಹಕಾರದಿಂದ ನಿತೀಶ್ ಇಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ್ದಾರೆ.
ಅದರಲ್ಲೂ ಟೆಸ್ಟ್ ತಂಡಕ್ಕೆ ಆಯ್ಕೆಯಾದ ಅನುಭವವಿಲ್ಲದ ನಿತೀಶ್ ನಗೆಪಾಟಲಿಗೆ ಗುರಿಯಾಗಿದ್ದರು. ಆದರೆ ಅವರ ಕೌಶಲ್ಯದಿಂದ ಆಸೀಸ್ ಗೆ ತಕ್ಕ ಉತ್ತರವನ್ನು ನೀಡಿದ್ದಾರೆ.
ತಿಮ್ಮಪ್ಪನ ಪರಮಭಕ್ತ ನಿತೀಶ್ ರೆಡ್ಡಿ: ನಿತೀಶ್ ಕುಮಾರ್ ತಿಮ್ಮಪ್ಪನ ಪರಮ ಭಕ್ತ ಎಂದೇ ಹೇಳಬೇಕು. ತಿಮ್ಮಪ್ಪ ನಂಬಿದವರನ್ನು ಕೈ ಬಿಡುವುದಿಲ್ಲ ಎಂಬುದಕ್ಕೆ ನಿತೀಶ್ ಉದಾಹರಣೆಯಾಗಿದೆ. ಟೆಸ್ಟ್ ಮುಗಿಸಿಕೊಂಡು ಮರಳಿದ ತಕ್ಷಣ ನಿತೀಶ್ ತಿರುಪತಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಅಲ್ಲದೇ ಬೆಟ್ಟವನ್ನು ಕಾಲು ನಡಿಗೆಯಲ್ಲಿ ಏರಿ. ಮೆಟ್ಟಿಲುಗಳನ್ನು ಮೊಣಕಾಳಿನಲ್ಲಿ ಹತ್ತಿದರು. ಇದು ಅವರು ತಿಮ್ಮಪ್ಪನ ಮೇಲೆ ಇಟ್ಟಿರುವ ಭಕ್ತಿಯನ್ನು ತೋರಿಸುತ್ತದೆ.
ಇಂಗ್ಲೆಂಡ್ ವಿರುದ್ಧ ಟಿ 20 ಪಂದ್ಯಕ್ಕೆ ಆಯ್ಕೆ :
ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲಿ ಹಾಗೂ ಐಪಿಎಲ್ ನಲ್ಲಿ ಉತ್ತಮ ಪ್ರದರ್ಶನ ನೀಡಿದ ನಿತೀಶ್ ಸದ್ಯ ತವರಿನಲ್ಲಿ ನಡೆಯಲಿರುವ ಟಿ 20 ಪಂದ್ಯಕ್ಕೆ ಆಯ್ಕೆಯಾಗಿದ್ದಾರೆ.