ಅಪರಾಧ ಸುದ್ದಿ

ಬರ್ತಡೇ ಆಚರಿಸಿಕೊಂಡಿದ್ದ ಬಾಲಕನ ಬಲಿ ಪಡೆದ ಅಪಘಾತ

Share It

ಬೆಂಗಳೂರು: ಬರ್ತಡೇ ಆಚರಣೆಗೆಂದು ಅಕ್ಕನ ಮನೆಗೆ ಹೋಗಿದ್ದ ಬಾಲಕನೊಬ್ಬ ವಾಪಸ್ ಬರುವಾಗ ಅಪಘಾತದಲ್ಲಿ ಮರಣವೊಂದಿರುವ ಘಟನೆ ನಗರದಲ್ಲಿ ನಡೆದಿದೆ.

ನಗರದ ಏರ್‌ಪೋರ್ಟ್ ರಸ್ತೆಯ ಹೆರ್ಣಣೂರು ಬಳಿ ಶನಿವಾರ ರಾತ್ರಿ ೧೧.೨೦ರಲ್ಲಿ ನಡೆದ ಟ್ರೂಷರ್ ವಾಹನವೊಂದು ಹಿಂದಿನಿAದ ಬೈಕ್‌ಗೆ ಡಿಕ್ಕಿ ಹೊಡೆದಿತ್ತು. ವಾಹನ ಬೈಕ್ ಮೇಲೆ ಹತ್ತಿದ್ದರಿಂದ ಹಿಂಬದಿಯಲ್ಲಿ ಕುಳಿತಿದ್ದ ಭಾನುತೇಜ ಎಂಬ ೧೨ ವರ್ಷದ ಬಾಕಲ ಸ್ಥಳದಲ್ಲಿಯೇ ಮೃತಪಟ್ಟಿದ್ದ.

ಭಾನುತೇಜ ಆಂಧ್ರಪ್ರದೇಶದ ಚಿತ್ತೂರು ಮೂಲದ ಬಾಲಕನಾಗಿದ್ದು, ಈತ ಕಳೆದ ಒಂದು ತಿಂಗಳಿAದ ಆರ್.ಟಿ.ನಗರದ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ವೇದ ಅಧ್ಯಯನ ಮಾಡುತ್ತಿದ್ದ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಬಾಲಕ ತನ್ನ ಗುರುಗಳ ಮನೆಯಲ್ಲಿಯೇ ವಾಸವಾಗಿದ್ದ ಎನ್ನಲಾಗಿದೆ.

ಶನಿವಾರ ಬಾಲಕನ ಹುಟ್ಟುಹಬ್ಬವಿದ್ದ ಕಾರಣಕ್ಕೆ ಆತನನ್ನು ಅಕ್ಕನೆ ಮನೆಗೆ ಕರೆದೊಯ್ಯಲಾಗಿತ್ತು. ಅಲ್ಲಿಂದ ತನ್ನ ಗುರು ಚಕ್ರಧರಣ್ ಜತೆಗೆ ಬೈಕ್ ನಲ್ಲಿ ವಾಪಸ್ ಬರುತ್ತಿದ್ದಾಗ ಘಟನೆ ನಡೆದಿದೆ.
ಘಟನೆಯಲ್ಲಿ ಚಕ್ರಧರಣ್‌ಗೂ ಗಂಭೀರವಾಗಿ ಗಾಯಗಳಾಗಿವೆ.

ಬಾಲಕ ಭಾನುತೇಜ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಡಾ.ಅಂಬೇಡ್ಕರ್ ಮೆಡಿಕಲ್ ಕಾಲೇಜಿಗೆ ರವಾನೆ ಮಾಡಲಾಗಿದ್ದು, ಗಾಯಾಳುವನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ತನಿಖೆ ಮುಂದುವರಿದಿದೆ.


Share It

You cannot copy content of this page