ಬೆಂಗಳೂರು: ಮಹಾತ್ಮಾಗಾಂಧಿ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದ ಆರೋಪದಡಿಯಲ್ಲಿ ಅಮರಾವತಿ ವಿರುದ್ಧ ಉಡುಪಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.
ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನಲ್ಲಿ ಬಾಂಗ್ಲಾ ಪಾಠ ಎಂಬ ವಿಷಯದ ಕುರಿತು ಮಾತನಾಡುವಾಗ ಅಮರಾವತಿ ಅವರು, ಮಹಾತ್ಮ ಗಾಂಧೀಜಿ ಅವರನ್ನು ನಿಂದಿಸಿ ಮಾತನಾಡಿದ್ದರು. ಘಟನೆಗೆ ಸಂಬAಧಿಸಿದAತೆ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿರುವ ಪೊಲೀಸರು, ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ.
ಮಹಾತ್ಮಾ ಗಾಂಧಿಯನ್ನು ರಾಷ್ಟçಪಿತ ಎಂದು ಕರೆಯಲು ನಾನು ಒಪ್ಪುವುದಿಲ್ಲ, ಏಕೆಂದರೆ, ಅವರು ಜಿನ್ನಾ ಜತೆ ಸೇರಿ ಪಾಕಿಸ್ತಾನ ಜನನಕ್ಕೆ ಕಾರಣರಾಗಿದ್ದರು. ಹೀಗಾಗಿ, ಅವರನ್ನು ಭಾರತದ ರಾಷ್ಟçಪಿತ ಎಂದು ಕರೆಯಲು ಒಪ್ಪಿಗೆ ಇಲ್ಲ ಎಂದು ಹೇಳಿದ್ದರು.